ಶ್ರೀದೇವಳದ ನಿತ್ಯ ಪೂಜಾ ವಿವರ
ಶ್ರೀಗುರುನರಸಿಂಹ ದೇವರು
ಸಮಯ 4-45 ರಿಂದ ಪೂಜೆ ಪ್ರಾರಂಭ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಪವಮಾನ ಸೂಕ್ತ ಪಾರಾಯಣ ಸಹಸ್ರನಾಮ ಪಾರಾಯಣ ನೈವೇದ್ಯ.
6-30ಕ್ಕೆ ಮಹಾಪೂಜೆ ಮಹಾಮಂಗಳಾರತಿ.
ಧನುರ್ಮಾಸದಲ್ಲಿ ಮಾಸ ಪರ್ಯಂತ ಬೆಳಗ್ಗಿನ ಪೂಜೆ 4-00ಕ್ಕೆ ಮಹಾಮಂಗಳಾರತಿ ಬೆಳಗ್ಗೆ 5-00 ಕ್ಕೆ.
ಮಧ್ಯಾಹ್ನ 11-00 ಕ್ಕೆ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ಪವಮಾನ ಸೂಕ್ತಾಭಿಷೇಕ,ಸಹಸ್ರನಾಮ ಪಾರಾಯಣ. ಹರಿವಾಣ ನೈವೇದ್ಯ ಹಾಲುಪರಮಾನ್ನ ನೈವೇಧ್ಯ,
ವಿಶೇಷ ದಿನಗಳಲ್ಲಿ ಸೇವಾಕರ್ತರು ಇದ್ದಲ್ಲಿ ಸಂಹಿತಾಭಿಷೇಕ, ಕಲಶಾಭಿಷೇಕ
ಮಕರ ಸಂಕ್ರಾಂತಿಯಿಂದ ಮಿಥುನ ಸಂಕ್ರಾತಿಯವರೆಗೆ ಬೆಳಗ್ಗೆ ಗಣಹೋಮ, ಉತ್ಸವ ಬಲಿ, ರಜತ ರಥೋತ್ಸವ (ಶ್ರೀಆಂಜನೇಯ ದೇವಸ್ಥಾನದವರೆಗೆ).
ಕರ್ಕಾಟಕ ಸಂಕ್ರಾಂತಿಯಿಂದ ಧನುಸಂಕ್ರಾಂತಿಯವರೆಗೆ ಬೆಳಗ್ಗೆ ಗಣಹೋಮ, ಉತ್ಸವ ಬಲಿ,
12-00ಕ್ಕೆ ಮಹಾಪೂಜೆ, ಮಹಾಮಂಗಳಾರತಿ.
ಸಂಜೆ 6-30ಕ್ಕೆ ಬೈದಬಲಿ ಪೂಜೆ, ಮಂಗಳಾರತಿ, ಸ್ತ್ರೀಸೂಕ್ತ ಅಭಿಷೇಕ.
ಸಂಜೆ 7-30ಕ್ಕೆ ನೈವೇಧ್ಯ, ಮಹಾಪೂಜೆ ಮಹಾಮಂಗಳಾರತಿ.
ಸಿಂಹಮಾಸದ ಪರ್ಯಂತ ಸೋಣೆ ಆರತಿ.
ವಿಶೇಷ ದಿನಗಳಲ್ಲಿ ಸೇವಾಕರ್ತರು ಇದ್ದಲ್ಲಿ ಕಿರೇರಂಗಪೂಜೆ, ಹೀರೆರಂಗಪೂಜೆ, ಪುಷ್ಫ ರಥೋತ್ಸವ, ಬೆಳ್ಳಿ ರಥೋತ್ಸವ.
ಶ್ರೀ ಆಂಜನೇಯ ದೇವರು
ಬೆಳಗ್ಗೆ 5-00 ರಿಂದ ಪಂಚಾಮೃತಾಭಿಷೇಕ, ಪವಮಾನ ಸೂಕ್ತ ಪಾರಾಯಣ, ವಾಯುಸ್ತುತಿ ಪಾರಾಯಣ, ಸುಂದರಕಾಂಡ ಪಾರಾಯಣ.
ಸಿಂಧೂರ ಬೆಣ್ಣೆ ಮಿಶ್ರಿತ ಪೂರ್ಣಾಲಾಂಕರ, ನೈವೇಧ್ಯ, ಗಂಟೆ 6-30ರಿಂದ ಮಹಾಪೂಜೆ, ಮಹಾಮಂಗಳಾರತಿ.
ಮಧ್ಯಾಹ್ನ 11-30 ಕ್ಕೆ ನೈವೇಧ್ಯ, ಮಂಗಳಾರತಿ.
ಸಂಜೆ ಸೇವಾಕರ್ತರು ಇದ್ದಲ್ಲಿ ಗಂಟೆ 4-30ರಿಂದ 6-30 ರವರೆಗೆ ರಂಗಪೂಜೆ.
ಪ್ರತಿ ಹುಣ್ಣಿಮೆಯಂದು ನವಕಪ್ರಧಾನ ಹೋಮ ಸಹಿತ ಕಲಶಾಭಿಷೇಕ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು
ಬೆಳಗ್ಗೆ 5-00 ರಿಂದ ಪೂಜಾ ಪ್ರಾರಂಭ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ನೈವೇಧ್ಯ ಗಂಟೆ 6-00 ಕ್ಕೆ ಮಹಾಮಂಗಳಾರತಿ.
ಮಧ್ಯಾಹ್ನ 11-30ಕ್ಕೆ ಕುಂಕುಮಾರ್ಚನೆ, ಹಾಲುಪರಮಾನ್ನ ನೈವೇಧ್ಯ, ಮಂಗಳಾರತಿ.
ಸಂಜೆ 6-30ಕ್ಕೆ ಅಲಂಕಾರಪೂಜೆ, ಕುಂಕುಮಾರ್ಚನೆ, ನೈವೇಧ್ಯ, ಮಂಗಳಾರತಿ.
ಸಂಜೆ ಸೇವಾಕರ್ತರು ಇದ್ದಲ್ಲಿ ರಂಗಪೂಜೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಚಂಡಿಕಾ ಸಪ್ತಶತಿ ಪಾರಾಯಣ.
ಶ್ರೀ ಗಣಪತಿ ದೇವರು
ಬೆಳಗ್ಗೆ 5-00 ರಿಂದ ಪ್ರಾರಂಭ, ಪಂಚಾಮೃತಾಭಿಷೇಕ, ಉಪನಿಷತ್ ಅಭಿಷೇಕ, ನೈವೇಧ್ಯ 6-00 ಕ್ಕೆ ಮಹಾಮಂಗಳಾರತಿ.
ಮಧ್ಯಾಹ್ನ 11-30 ಕ್ಕೆ ನೈವೇಧ್ಯ, ಮಂಗಳಾರತಿ.
ಸಂಜೆ 6-30 ಕ್ಕೆ ಅಲಂಕಾರ ಪೂಜೆ, ನೈವೇಧ್ಯ, ಮಹಾಮಂಗಳಾರತಿ.
ಸಂಜೆ ಸೇವಾಕರ್ತರು ಇದ್ದಲ್ಲಿ ರಂಗಪೂಜೆ.
ಪ್ರತಿ ಸಂಕಷ್ಟಹರಚತುರ್ಥಿಯಂದು ಗಣಹೋಮ.
ಶ್ರೀನಾಗದೇವರು
ಬೆಳಗ್ಗೆ ಪಂಚಾಮೃತಭಿಷೇಕ ಪೂರ್ವಕ ಪೂಜೆ.
ಸೇವಾಕರ್ತರು ಇದ್ದಲ್ಲಿ ತನು ಇತ್ಯಾದಿ ವಿಶೇಷ ಸೇವೆ.
ಪ್ರತಿ ಅಮವಾಸ್ಯೆ ಪಾಡ್ಯ ಶುದ್ಧ ಷಷ್ಠಿಯಂದು ಪವಮಾನ ಕಲಶಾಭಿಷೇಕ.
ಶ್ರೀಗುರುನರಸಿಂಹ ದೇವರಿಗೆ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ಸೇವೆಗಳು
1. ಪ್ರತಿ ಜನವರಿ 16 :- ಬ್ರಹ್ಮರಥೋತ್ಸವ
2. ಮೇಷಮಾಸದಲ್ಲಿ :- ನರಸಿಂಹ ಜಯಂತಿ
3. ಕಾರ್ತಿಕ ಅಮವಾಸ್ಯೆ :- ದೀಪೋತ್ಸವ
4. ಸಿಂಹಮಾಸ :- ವಿಟ್ಲಪಿಂಡಿ ಉತ್ಸವ
5. ಚಿತ್ರಪೂರ್ಣಿಮೆ :- ಶ್ರೀಆಂಜನೇಯ ಜಯಂತಿ
6. ವೃಶ್ಚಿಕ ಮಾಸ ಹುಣ್ಣಿಮೆ :- ಸಂಜೆ ಮಹಾಮೂಡುಗಣಪತಿ ಸೇವೆ, ಮರುದಿನ ಮನೆಯಕ್ಕಿ ಸಮಾರಾಧನೆ
ವಿಶೇಷ ಪೂಜೆ :- ಹೀರೇ ರಂಗಪೂಜೆ, ಕಿರೇ ರಂಗಪೂಜೆ, ಸಂಹಿತಾಭಿಷೇಕ, ತುಲಾಭಾರ, ನರಸಿಂಹ ಹೋಮ, ಗಣಹೋಮ, ಸಮಾರಾಧನೆ, ಮೂಡುಗಣಪತಿ ಸೇವೆ, ಹೂವಿನ ಪೂಜೆ, ಸರ್ವಸೇವೆ, ಹರಿವಾಣ ನೈವೇಧ್ಯ ಇತ್ಯಾದಿ…