||Sri Gurunarasimha: Prasanna: ||
SRI GURU NARASIMHA TEMPLE, SALIGRAMA
Kshetra Mahatme:
To enable every Koota Brahmin to know the scantity of the kshetra, breif Kshetra Mahatme of the temple is given here.
Pushkara Khanda chapter of Padma purana has details of this temple. Suta Puranika narrated this mahatme on the request of Muni Pungavas.
The land mass given by Samudra Raja on the request of Parashurama ranging from the current Gokarna on the North to Kanyakumari on the south is called Parashurama Kshetra.
This place has many important Thirta Kshetras and Thirta Sarovaras. Narada Muni visited the place between Seetha river and Kumbha Kashi kshetra where many Koota Muni Pungavas where meditating, after taking holy dip in different theerta sarovaras and meditating at thirta kshetras.
During this time a unexpected event happened at this place. Earth shook and there was a thunderous sound. All animals were scared and birds circled the sky. There was heavy winds and the freightned Munis came to Narada and requested for protection. Suddenly they heard a Divya Vani that preached about Narasimha Vichara.
The Divya Vani informed that an idol of Lord Narasimha, holding Shanka and Chakra in both hands and seated in Yogananda Posture that is worshiped by Brahma and Rudra is sitated between Shanka and Chakra thirta in middle of a Ashwatta (people) tree. This will be installed by Narada Muni. Narada agreed that he had realized the same during his meditation.
They searched and found the statue of Lord Narasimha and prayed to him. Narada then installed the statue of Lord Narasimha in between Shanka and Chakra Theertha. On Narada’s prayer Lord Narasimha appeared and as per his request agreed to be there in the location permanently.
This place in the middle of Koota Kshetra, where Lord Narasimha resides in Saligrama idol is called Saligrama. Devotees will acheive all their desires by worshipping this Saligrama idol. Taking holy dip in Chakra Theertha rids one of all diseases and fear of enemy. Holy dip in Shanka Theerta clenses one from all the sins. One who takes holy dip in both the theerthas and worships Narasimha will attain prosperity.
According to Skanda Purana Sahyadri Kanda, learned Brahmin families under the leadership of Bhattacharya, came to present day Saligrama from Ahichatra on the banks of Godavari river, on the request of King Lokaditya. King Lokaditya wanted to reinstate learned Brahmins in his kindgom for the prosperity of the kingdom. Maha Yagna’s like “Atiratra” were performed by these Brahmins on request of King Lokadithya. Before starting these yagnas, “to avoid obstacles” these learned, prayed to Lord Ganapathi and obtained blessings.
Bhattacharya was delighted to see elephants and lions living together, a situation which he had already experienced during his meditation and named this place “Nirvairya Sthala” meaning “Enemy less abode”. This is signified by the symbolic representation of elephant in the form of Lord Ganapathi and Lion in the form of Lord Narasimha, even till this date in the Saligrama temple. The idol is facing west and has chakra in right hand and conch shell in the left hand.
King Lokaditya allocated 14 villages to Brahmins who accompanied Bhattacharya and requested them to stay there and perform yagas and yajnas. While returning back to Ahichatra, Bhattacharya instructed his disciples staying back, to worship Lord Narasimha as both Guru and Lord.
From those days we Koota Brahmins worship Lord Narasimha as both Guru and Lord.
ಶ್ರೀ ಕ್ಷೇತ್ರ ಪರಿಚಯ
ಶ್ರೀದೇವಳದ ವಿವರ
ದೇವಸ್ಥಾನಗಳ ತವರೂರು ಎನಿಸಿರುವ ದಕ್ಷಿಣ ಭಾರತದಲ್ಲಿನ ಪ್ರಸಿದ್ದ ನರಸಿಂಹ ಕ್ಷೇತ್ರಗಳಲ್ಲಿ ಹಾಗೂ ಸ್ವಯಂ ವ್ಯಕ್ತವಾದ ಮಹಾವಿಷ್ಣುವಿನ ಅಷ್ಠಕ್ಷೇತ್ರಗಳಲ್ಲಿ ಪರಶುರಾಮ ಕ್ಷೇತ್ರದ ಸಾಲಿಗ್ರಾಮದ ಶ್ರೀಗುರುನರಸಿಂಹ ಕ್ಷೇತ್ರವು ಒಂದಾಗಿದೆ. ಯೋಗ ಭಂಗಿಯಲ್ಲಿ ಕುಳಿತು ಎಡಗೈಯಲ್ಲಿ ಶಂಖ ಬಲಗೈಯಲ್ಲಿ ಚಕ್ರವನ್ನು ಹಿಡಿದಿರುವುದರಿಂದ ಶ್ರೀಯೋಗಾನಂದನರಸಿAಹ ದೇವರೆಂದು ಹಾಗೂ ಹೃದಯಭಾಗದಲ್ಲಿ ಅಂತರ್ಗತಳಾಗಿ ಶ್ರೀಲಕ್ಷಿö್ಮÃಯು ನೆಲಸಿರುವುದರಿಂದ ಶ್ರೀಲಕ್ಷಿö್ಮÃನರಸಿಂಹ ದೇವರೆಂದು ಕರೆಯುತ್ತಾರೆ. ದಿವ್ಯಮಂಗಲ ನೃಸಿಂಹ ವಿಗ್ರಹದ ಶಿರವು ಶೇಷನ ಹೆಡೆಯಿಂದ ಆಚ್ಛಾದಿತವಾಗಿದೆ ಸಿಂಹಮುಖ, ಮನುಷ್ಯಶರೀರ ಮತ್ತು ಚಂದ್ರ, ಸೂರ್ಯ ಮತ್ತು ಅಗ್ನಿಗಳೆಂಬ ಮೂರುಕಣ್ಣುಗಳಿವೆ ಈ ಪ್ರಕಾರದ ವಿಗ್ರಹಮೂರ್ತಿಯು ಶ್ರೀಸಾಲಿಗ್ರಾಮ ಕ್ಷೇತ್ರದಲ್ಲಿ ಮಾತ್ರ ಇದೆ ಎನ್ನಲಾಗಿದೆ.
ಕೋಟ ಸ್ಮಾರ್ಥ ಬ್ರಾಹ್ಮಣರು ದೇವಸ್ಥಾನವನ್ನೆ ಗುರುಮಠವೆಂದು ನರಸಿಂಹನ್ನೆ ಗುರುವೆಂದು ಸ್ವೀಕರಿಸಿ ಆರಾಧನೆ ಮಾಡುವುದರಿಂದ ಶ್ರೀಗುರುನರಸಿಂಹನೆAದೆ ಪ್ರಸಿದ್ಧಿಯನ್ನು ಪಡೆದಿರುವುದು ಮಾತ್ರವಲ್ಲದೆ ಗುರುವಾಗಿಯೂ, ಕುಲದೇವರಾಗಿಯೂ ನಂಬಿದವರ ಇಷ್ಟಾರ್ಥವನ್ನು ಕರುಣಿಸುತ್ತಿರುವುದು ಈ ಕ್ಷೇತ್ರದ ವೈಶಿಷ್ಠವಾಗಿದೆ.
ಶ್ರೀದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದ್ದು ಅರ್ಧಯೋಗಪಟ್ಟಾನ್ವಿತವಾಗಿದೆ. ಶ್ರೀಮಹಾಗಣಪತಿ ಯಂತ್ರವನ್ನು ಆದಿಯಲ್ಲಿ ಸ್ಥಾಪಿಸಿ ಮೇಲೆ ಕಮಲಪತ್ರದಲ್ಲಿ ನೃಸಿಂಹಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ನರಸಿಂಹಮೂರ್ತಿಯು ಸುಮಾರು ೪ನೇ ಶತಮಾನದ್ದೆಂದು ಇತಿಹಾಸಕಾರರು ಗುರುತಿಸಿದ್ದು ಕದಂಬವAಶದ ರಾಜಾ ಲೋಕಾದಿತ್ಯನ ಕಾಲಕ್ಕೆ ಸರಿಹೊಂದುತ್ತಿದೆ. ಪದ್ಮಪುರಾಣದ ಪುಷ್ಕರ ಖಂಡಾರ್ಗತ ‘ಶ್ರೀಸಾಲಿಗ್ರಾಮಕ್ಷೇತ್ರಮಹಾತ್ಮö್ಯಮ್’ ಮತ್ತು ಸ್ಕಂದ ಪುರಾಣದ ಸಹ್ಯಾದ್ರಿಖಂಡ ಮತ್ತು ಲೋಕಾಧಿತ್ಯ ಪದ್ಧತಿಗಳಲ್ಲಿ (ಗ್ರಾಮಪದ್ಧತಿ) ಈ ಕ್ಷೇತ್ರದ ಕುರಿತು ಮಾಹಿತಿ ಇದೆ.
ಶ್ರೀದೇವಳದ ಗರ್ಭಗೃಹವು ಚರ್ತುರಶ್ವ ಸಿಂಹ ಆಯದಲ್ಲಿದ್ದು ಪ್ರಧಾನ ದೇವರು ನರಸಿಂಹ , ದಕ್ಷಿಣ ಒಳ ಪೌಳಿಯ ನೈರುತ್ಯ ಮೂಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿಗ್ರಹ , ಉತ್ತರ ಒಳ ಪೌಳಿಯ ವಾಯುವ್ಯ ಮೂಲೆಯಲ್ಲಿ ಗಣಪತಿ ವಿಗ್ರಹದಿಂದ ಕಂಗೊಳಿಸುತ್ತಿದ್ದರೆ, ನರಸಿಂಹನಿಗೆ ಎದುರಾಗಿ ರಥಬೀದಿ ಪಶ್ಚಿಮ ತುದಿಯಲ್ಲಿ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ, ದೇವಸ್ಥಾನದ ಹೊರಪೌಳಿಯ ನೈರುತ್ಯ ದಿಕ್ಕಿನಲ್ಲಿ ಶಂಖ ತೀರ್ಥ ಸರೋವರದ ದಂಡೆಯಲ್ಲಿ ನಾಗ ಸನ್ನಿಧಿಯನ್ನು ಸ್ಥಾಪಿಸಲಾಗಿದೆ. ನರಸಿಂಹಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು ದ್ವಿಭುಜವಾಗಿದೆ. ಬಲಗೈಯಲ್ಲಿ ಚಕ್ರವೂ, ಎಡಗೈಯಲ್ಲಿ ಶಂಖವೂ ಧರಿಸಲ್ಪಟ್ಟದ್ದರಿಂದ ದೇವಳದ ಉಭಯಪಾರ್ಶ್ವಗಳಲ್ಲಿ ಶಂಖ ತೀರ್ಥ ಮತ್ತು ಚಕ್ರತೀರ್ಥ ಸರೋವರಗಳಿವೆ. ಇವುಗಳ ತೀರ್ಥಸ್ನಾನ ಹಾಗೂ ನರಸಿಂಹ ಆರಾಧನೆಯಿಂದ ಬ್ರಹ್ಮ ಹತ್ಯಾದಿ ಸರ್ವ ದೋಷಗಳು, ಶತ್ರುಭಯ, ಮತ್ತು ಸರ್ವರೋಗಗಳು ನಿವಾರಣೆಯಾಗುತ್ತದೆ ಹಾಗೂ ಸರ್ವಸಿದ್ಧಿಯನ್ನು ಲಭಿಸುತ್ತದೆ.
ಇಲ್ಲಿ ಈ ಹಿಂದೆ ಕಾಡು ಪ್ರದೇಶವಾಗಿದ್ದು ಆನೆ ಮತ್ತು ಸಿಂಹಗಳು ಇಲ್ಲಿ ಅನೋನ್ಯವಾಗಿರುವುದನ್ನು ನೋಡಿ ಮತ್ತು ಜಟಾಧಾರಿಯಾಗಿ ಶಾಂತಸ್ವರೂಪನಾಗಿ ಸಿಂಹವು ಪೂರ್ವವನ್ನು ಗಜವು ಪಶ್ಚಿಮವನ್ನು ನೋಡುತ್ತಿರುವ ಹಾಗೂ ಇಷ್ಟಾರ್ಥವನ್ನು ಕರುಣಿಸುವ ಈ ಪವಿತ್ರ ಕ್ಷೇತ್ರವನ್ನು ಶ್ರೀಭಟ್ಟಾಚಾರ್ಯರು “ನಿರ್ವೈರ ಸ್ಥಳ”ವೆಂದು, ಸೀತಾನದಿಯ ತಟದಿಂದ ದಕ್ಷಿಣೋತ್ತರವಾಗಿ ಮಣೂರು ಗ್ರಾಮದವರೆಗೆ ಸಾಲಾಗಿ ೧೪ಗ್ರಾಮಗಳಿದ್ದು ಈ ಕೂಟಕ್ಷೇತ್ರದ ಮಧ್ಯದಲ್ಲಿ ಶಾಲಗ್ರಾಮರೂಪಿಯಾದ ಶ್ರೀನೃಸಿಂಹನು ವ್ಯಕ್ತವಾಗಿರುವುದರಿಂದ ಈ ಸ್ಥಳವನ್ನು ಸಾಲಿಗ್ರಾಮವೆಂದು ಕರೆದರು ಎನ್ನುವ ಐತಿಹ್ಯವಿದೆ.
ಶ್ರೀನರಸಿಂಹ ದೇವರ ಉಗ್ರತೆಯನ್ನು ಶಾಂತಗೊಳಿಸುವ ಸಲುವಾಗಿ ದೇವಾಲಯದ ಎದುರಿನ ವಿಶಾಲವಾದ ರಥಬೀದಿಯ ಪಶ್ಚಿಮ ತುದಿಯಲ್ಲಿ ಶ್ರೀನರಸಿಂಹ ದೇವರ ಅಭಿಮುಖವಾಗಿ ಹನುಮಂತನನ್ನ sಸ್ಥಾಪಿಸÀಲಾಗಿದೆ. ಶ್ರೀ ನರಸಿಂಹ ದೇವರÀ ಉಗ್ರತೆಯ ಉರಿಯನ್ನು ಶಮನಗೊಳಿಸುವ ಸಲುವಾಗಿ ಪ್ರತಿದಿನ ಈತನಿಗೆ ಸಿಂಧೂರ ಬೆಣ್ಣೆ ಲೇಪನ ಮಾಡಿ ತಂಪುಗೊಳಿಸುತ್ತಾರೆ.
ಪ್ರಾತಃಕಾಲದ ನರಸಿಂಹನ ಪೂಜೆ ನಂತರ ಶ್ರೀದೇವರ ನೈರ್ಮಲ್ಯದ ಪುಷ್ಫವನ್ನು ಆಂಜನೇಯನ ಮುಡಿಗೆ ಸಮರ್ಪಿಸಿ ಪೂಜೆ ಮಾಡುವುದು ಹಿಂದಿನ ಕಾಲದಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ ಅಲ್ಲದೇ ಜಾತ್ರೆಯ ಸಂಧರ್ಭದಲ್ಲಿ ಬ್ರಹ್ಮರಥವು ಮತ್ತು ಸಂಕ್ರಾAತಿ ಮತ್ತು ಇತರೇ ಶ್ರೀದೇವಳದ ಸಾಂಪ್ರಾದಾಯಿಕ ಉತ್ಸವದ ಸಮಯದಲ್ಲಿ ಹಾಗೂ ಭಕ್ತಾದಿಗಳಿದ ನಡೆಸಲ್ಪಡುವ ರಥೋತ್ಸವ ಸೇವೆಯಲ್ಲಿ ಶ್ರೀಆಂಜನೇಯನ ಸನ್ನಿಧಿಯವರೆಗೆ ರಥೋತ್ಸವ ಜರುಗಿ ಅಲ್ಲಿ ಶ್ರೀಆಂಜನೇಯನಿಗೆ ಪೂಜೆಗೊಳಿಸಿದ ನಂತರ ಶ್ರಿನರಸಿಂಹ ದೇವರ ಉತ್ಸವವು ಮರಳಿ ಬರುತ್ತದೆ
ಕೂಟಬ್ರಾಹ್ಮಣರ ಗುರುಸ್ಥಾನ
ಸಮಾಜದ ಎಲ್ಲಾ ವರ್ಗದ ಜನರು ತಮ್ಮದೇ ಆದ ಒಂದು ಗುರುಮಠ, ಆ ಮಠದ ಮಾನವ ಪೀಠಾಧಿಪತಿಗಳನ್ನು ಹೊಂದಿರುವುದು ಸರ್ವೇ ಸಾಮಾನ್ಯಾವಾಗಿರುತ್ತದೆ. ಆದರೆ ಮೂಲತಃ ಕೋಟ ೧೪ ಗ್ರಾಮಗಳಲ್ಲಿ ವಾಸವಾಗಿದ್ದ ಇಂದು ಬೇರೆ ಬೇರೆ ಕಾರಣಗಳಿಂದ ಪ್ರಪಂಚದಾದ್ಯAತ ನೆಲಸಿರುವ ೮ರಿಂದ ೯ಲಕ್ಷ ಅಂದಾಜು ಸಂಖ್ಯಾ ಬಾಹುಳ್ಯವನ್ನು ಹೊಂದಿರುವ ಕೋಟ ಬ್ರಾಹ್ಮಣರೆಂಬ ಪಂಗಡದವರು ಸ್ಮಾರ್ತ ಬ್ರಾಹ್ಮಣರಾಗಿದ್ದು ಶ್ರೀಗುರುನರಸಿಂಹ ದೇವಸ್ಥಾನವನ್ನು ತಮ್ಮ ಗುರುಮಠವೆಂದು ಇಲ್ಲಿನ ಪ್ರಧಾನ ದೇವರಾದ ಶ್ರೀ ನರಸಿಂಹನನ್ನೇ ಗುರುವಾಗಿ ಸ್ವೀಕರಿಸಿರುತ್ತಾರೆ ಹಾಗೂ ಕೋಟೇಶ್ವರ ಮಾಗಣೆಯವರಿಗೆ ಕುಲದೇವರಾಗಿ ಮತ್ತು ಕೋಟ ಹದಿನಾಲ್ಕು ಗ್ರಾಮಸ್ಥರಿಗೆ ಪ್ರಧಾನ ದೇವರಾಗಿ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ.
ಯಜ್ಞ ಯಾಗಾದಿಗಳನ್ನು ಮತ್ತು ಶ್ರೀನರಸಿಂಹ ದೇವರ ಪೂಜಾ ಕೈಕಂರ್ಯಗಳನ್ನು ಮಾಡಲು ಉತ್ತರದ ಗೋದಾವರಿ ತೀರದಿಂದ ಶ್ರೀಭಟ್ಟಾಚಾರ್ಯರರು ಕರೆತಂದ ವೈದಿಕ ಪರಂಪರೆಯ ಬ್ರಾಹ್ಮಣರನ್ನು ಕೋಟ ಬ್ರಾಹ್ಮಣರೆಂದು ಕರೆಯಲಾಗಿದ್ದು ಅವರೆಂದರೆ – ಹಂದೆ, ಬಾಸ್ರಿ, ತುಂಗ, ನಾವಡ, ಹೊಳ್ಳ, ಮಯ್ಯ, ಹೆಬ್ಬಾರ, ಕಾರಂತ ಎಂಬ ಕುಲನಾಮವುಳ್ಳ ಅಷ್ಟವರ್ಗಗಳ ಹಾಗೂ ಈ ವರ್ಗಗಳ ಉಪಕವಲುಗಳಾದ ಅಲ್ಸೆ, ಉರಾಳ, ಹೇರ್ಳೆ, ಐತಾಳ, ಉಪಾಧ್ಯ, ಭಟ್ಟ, ಬಾಯಿರಿ ಮುಂತಾದ ಉಪವರ್ಗಗಳು. ಇವರಿಗೆ ಶ್ರೀಭಟ್ಟಚಾರ್ಯರು ರಾಜನು ದಾನವಾಗಿ ನೀಡಿದ ಭೂಮಿಯಲ್ಲಿ ಅಂದರೆ ಸಾಲಿಗ್ರಾಮದ ಸುತ್ತಮುತ್ತಲಿನಲ್ಲಿರುವ ೧೪ ಗ್ರಾಮಗಳಾದ ಮಣೂರು, ಗಿಳಿಯಾರು, ಕೋಟತಟ್ಟು, ಕಾರ್ತಟ್ಟು, ಹಂದಟ್ಟು, ಚಿತ್ರಪಾಡಿ, ಪಾರಂಪಳ್ಳಿ, ಕಾರ್ಕಡ, ಗುಂಡ್ಮಿ ಮೂಡಹಡು, ಪಾಂಡೇಶ್ವರ ಐರೋಡಿ, ಕೋಡಿ, ಬಾಳ್ಕುದ್ರುವಿನಲ್ಲಿ ನೆಲೆನಿಲ್ಲುವಂತೆ ಮತ್ತು ಶ್ರೀ ನರಸಿಂಹದೇವರನ್ನು ಗುರುವಾಗಿಟ್ಟುಕೊಂಡು ಪೂಜಿಸಿಕೊಂಡು ಬರುವಂತೆ ಆದೇಶಿಸಿದರಂತೆ. ಅಂದಿನಿAದ ಯಾವುದೇ ಶುಭ ಕಾರ್ಯಕ್ರಮ ಪ್ರಾರಂಭಿಸುವ ಮುನ್ನ ಶ್ರೀದೇವರಿಗೆ ಸೇವೆಯೊಂದಿಗೆ ಗುರುಕಾಣಿಕೆಯನ್ನು ಸಮರ್ಪಿಸುವುದು ಸಂಪ್ರದಾಯವಾಗಿದೆ.
ಕ್ಷೇತ್ರ ಪುರಾಣ
ಶ್ರೀ ನಾರದ ಮಹರ್ಷಿಗಳು ಪರಶುರಾಮ ಕ್ಷೇತ್ರದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ದರ್ಶನಗಳನ್ನು ಮಾಡುತ್ತಾ ಕೋಟಿಲಿಂಗೇಶ್ವರನನ್ನು ಪೂಜಿಸಿ ವಿಷ್ಣು ಮತ್ತು ಶಿವ ಸ್ವರೂಪಿಯಾದ ಕುಂಬೇಶ್ವರನನ್ನು ಅರ್ಚಿಸಿ ಈ ಕುಂಭಕಾಶಿಕ್ಷೇತ್ರದಿAದ ದಕ್ಷಿಣಕ್ಕೆ ಸೀತಾನದಿಯವರೆಗೆ ವ್ಯಾಪಿಸಿರುವ ಪ್ರದೇಶದ ಮಧ್ಯದಲ್ಲಿ ಋಷಿಪುಂಗವರು ತಪಸ್ಸನ್ನು ಆಚರಿಸುತ್ತಿದ್ದ ಕೂಟ ಎಂಬ ಮಹಾಕ್ಷೇತ್ರವನ್ನು ಸಂದರ್ಶಿಸಿ ಅಲ್ಲಿಯೇ ಕೆಲವು ಕಾಲ ಪರ್ಯಂತ ತಪಸ್ಸನ್ನಾಚರಿಸುತ್ತಿದ್ದಾಗ ದಿವ್ಯವಾಣಿಯು ಕೇಳಿತು. ಆ ವಾಣಿಯು ನೆರದಿದ್ದ ಋಷಿಪುಂಗವರಲ್ಲಿ ಈ ಪ್ರಕಾರ ನುಡಿಯಿತು “ಹದಿನಾಲ್ಕು ಲೋಕಗಳನ್ನು ತನ್ನ ಉದರದಲ್ಲಿ ಇಟ್ಟುಕೊಂಡಿರುವ ಯೋಗಾನಂದ ಶ್ರೀನೃಸಿಂಹ ಎಂಬ ಹೆಸರಿನ ಶಿಲಾಕೃತವಾಗಿರುವ ಬ್ರಹ್ಮರುದ್ರಾದಿ ದೇವತೆಗಳಿಂದ ಪೂಜಿಸಲ್ಪಡುವ, ಶಂಖಚಕ್ರಗಳನ್ನು ಧರಿಸಿದ ಎರಡು ಬಾಹುಗಳಿಂದ ಶೋಭಿಸುವ, ತ್ರಿಮೂರ್ತಿರೂಪವಾದ ಅಶ್ವತ್ಥವೃಕ್ಷದ ಮಧ್ಯದಲ್ಲಿ ಭೋಗಮೋಕ್ಷಗಳೆರಡನ್ನು ಅನುಗ್ರಹಿಸುವ ಒಂದು ದಿವ್ಯಮಂಗಲಮೂರ್ತಿ ಇದೆ ಅದು ಸರ್ವರಕ್ಷಕ ಸಾಲಿಗ್ರಾಮಶಿಲಾರೂಪಿ ಶ್ರೀನೃಸಿಂಹಮೂರ್ತಿಯಾಗಿದ್ದು ಅದರ ಪ್ರತಿಷ್ಠಾದಿ ಕಾರ್ಯಗಳನ್ನು ನಾರದನು ಮಾಡುವನು” ಅದರಂತೆ ಈ ವೃಕ್ಷದಲ್ಲಿ ಆವಿರ್ಭವಿಸಿರುವ ಶಂಖಚಕ್ರಧಾರಿಯಾದ ಅನಾದಿಯೋಗಿ ಶ್ರೀನೃಸಿಂಹನನ್ನು ವೇದಾಗಮೋಕ್ತ ವಿಧಿಗಳಿಗನುಸಾರವಾಗಿ ವಿಧಿಜ್ಞನಾದ ನಾರದನು ಪ್ರತಿಷ್ಠೆ ಮಾಡಿದನು. ತನ್ನೆರಡು ಕೈಗಳಲ್ಲಿ ಪ್ರದರ್ಶಿಸುತ್ತಿದ್ದ ಶಂಖಚಕ್ರಗಳೆ ಎಡಬಲಪಾರ್ಶ್ವದಲ್ಲಿರುವ ಶಂಖತೀರ್ಥ ಮತ್ತು ಚಕ್ರತೀರ್ಥಗಳಾಗಿ ಶ್ರೀನೃಸಿಂಹನು ನೆಲಸಿದನು.
ನಂತರದ ದಿನಗಳಲ್ಲಿ ಬನವಾಸಿಯ ಕದಂಬವAಶದ ಮಯೂರವರ್ಮನ ಆಳ್ವಿಕೆಯ ನಂತರ ರಾಜಾ ಹುಬ್ಬಾಸಿಕನ ವಶವಾಗಿದ್ದ ರಾಜ್ಯವನ್ನು ಮಯೂರವರ್ಮನÀ ಮೊಮ್ಮಗ ಲೋಕಾದಿತ್ಯನು ಆತನನ್ನು ಯುದ್ದದಲ್ಲಿ ಸೋಲಿಸಿ ರಾಜ್ಯವನ್ನು ಹಿಂತುರುಗಿ ಪಡೆದನು ಆದರೆ ಆ ಹೊತ್ತಿಗಾಗಲೇ ಕಶ್ಯಪÀ ಋಷಿಗಳ ಆಜ್ಞೆಯಂತೆ ರಾಜ ಮಯೂರವರ್ಮನು ಅಹಿಚ್ಛತ್ರದಿಂದ ಕರೆದುಕೊಂಡು ಬಂದಿರುವ ಹಾಗು ೩೨ಗ್ರಾಮದಲ್ಲಿ ನೆಲೆಯಾಗಿದ್ದ ಬ್ರಾಹ್ಮಣರು ಆತನ ಮಂತ್ರಿಯ ಆಳ್ವಿಕೆಯಲ್ಲಿ ಉಪೇಕ್ಷಿತರಾಗಿ ಅಹಿಚ್ಛತ್ರಕ್ಕೆ ಹಿಂತಿರುಗಿದ್ದರು. ತನ್ನ ರಾಜ್ಯವು ಅಬ್ರಾಹ್ಮಣ್ಯಾವಾಗಿದ್ದ ಕಾರಣ ಲೋಕಾದಿತ್ಯನು ಅಹಿಚ್ಛತ್ರಕ್ಕೆ ಹೋಗಿ ಜಗತ್ಪೂಜ್ಯನೂ ಗುರುವರ್ಯನೂ ಆಗಿದ್ದ ಭಟ್ಟಾಚಾರ್ಯರಲ್ಲಿ ಯಜ್ಞ ಯಾಗ ಮತ್ತು ದೇವತಾ ಕೆಲಸಗಳನ್ನು ನಿರ್ವಹಿಸಿಕೊಡಬೇಕೆಂದು ಕೋರಿಕೊಂಡನು ಅದರಂತೆ ವಿದ್ವಾಂಸರು ವಿವಿಧ ವಿಪ್ರವರ್ಗದವರೊಡನೆ ಆಗಮಿಸಿ ಇಲ್ಲಿನ ಗ್ರಾಮಗಳಲ್ಲಿ ಪೌಂಡ್ರ, ಅತಿರಾತ್ರ ಮೊದಲಾದ ಮಹಾಯಾಗಗಳನ್ನು ಮಾಡಿಸಿದರು. ಈ ಯಾಗಗಳ ಪ್ರಾರಂಭದಲ್ಲಿ ನಿರ್ವಿಘ್ನತೆಗಾಗಿ ಶ್ರೀಮಹಾಗಣಪತಿಯನ್ನು ಪ್ರಾರ್ಥಿಸಿ ಅನುಗ್ರಹ ಪಡೆದರು. ಶ್ರೀಭಟ್ಟಾಚಾರ್ಯರರು ಬನವಾಸಿಯ ಮುಂದೆ ತಮ್ಮ ಶಿಷ್ಯರೊಂದಿಗೆ ಪಶ್ಚಿಮ ದಕ್ಷಿಣವಾಗಿ ಪ್ರಯಾಣಿಸುತ್ತಿದ್ದಾಗ ನಿರ್ವೈಯ ಕ್ಷೇತ್ರ ಸಾಲಿಗ್ರಾಮದಲ್ಲಿ ವಿಶ್ರಮಿಸಿದ ಸಮಯದಲ್ಲಿ ಕನಸಿನಲ್ಲಿ ಸಿಕ್ಕಿ ಶ್ರೀ ಮಹಾಗಣಪತಿಯು ನೀಡಿರುವ ಆದೇಶದಂತೆ ಅಶ್ವತ್ಥ್ತ ಮರದ ಪೊಟರೆಯಲ್ಲಿದ್ದ ಈ ಮೊದಲೇ ನಾರದ ಮಹರ್ಷಿಗಳಿಂದ ಪ್ರತಿಷ್ಠಾಪಿತವಾದ ನರಸಿಂಹದೇವರ ವಿಗ್ರಹವನ್ನು ಪುನಃ ಪ್ರತಿಷ್ಠೆ ಮಾಡಿದರು. ಅಹಿಚ್ಛತ್ರದಿಂದ ಕರೆದುಕೊಂಡು ಬಂದಿರುವ ವೈದಿಕ ಪರಂಪರೆಯ ಬ್ರಾಹ್ಮಣರನ್ನು (ಕೋಟ) ಪೂಜಾ ಕೈಂಕರ್ಯಕ್ಕೆ ನೇಮಿಸಿದರು. ಹಾಗೂ ಇವರಿಗೆ ಸಾಲಿಗ್ರಾಮದ ಸುತ್ತಮುತ್ತಲಿನ ಹದಿನಾಲ್ಕು ಗ್ರಾಮದಲ್ಲಿ ನೆಲೆನಿಲ್ಲಲು ವ್ಯವಸ್ಥೆಯನ್ನು ಮಾಡಿಕೊಟ್ಟರೆಂದು ಹೇಳಲಾಗುತ್ತಿದೆ.
ಆದಿಯಲ್ಲಿ ನರಸಿಂಹನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗಿತ್ತು, ನರಸಿಂಹನ ಉಗ್ರತೆಯ ಜ್ವಾಲೆಯಿಂದ ಮೂಡುದಿಕ್ಕಿನ ಗದ್ದೆಗಳಲ್ಲಿ ಬೆಳೆದ ಕೃಷಿ ಭಸ್ಮವಾಗುತ್ತಿತ್ತು ಮತ್ತು ಊರಿನವರಿಗೆ ಅವನ ಪ್ರಭೆಯನ್ನು ಸಹಿಸಲಾಗದೆ ತುಂಬಾ ತೊಂದರೆಗಳನ್ನು ಅನುಭವಿಸುವಂತಾಯಿತು. ಇದರಿಂದ ಅಂದಿನ ವಿದ್ವಾನ್ ಋತ್ವಿಜರೆಲ್ಲರು ಸೇರಿ ಮೂರ್ತಿಯನ್ನು ಅರಬ್ಬಿ ಸಮುದ್ರದ ಕಡೆಗೆ ಅಂದರೆ ಪಶ್ಚಿಮಾಭಿಮುಖವಾಗಿ ಸ್ಥಾಪಿಸಿದರು. ಆದರೆ ಅವನ ಉಗ್ರತೆಯಿಂದ ಪಡುಬದಿಯ ಕೃಷಿಯ ಹಾನಿ ಉಂಟಾಯಿತು ಮತ್ತು ಜನರಿಗೆ ಅವನ ಉಗ್ರತೆಯನ್ನು ಸಹಿಸಲು ಕಷ್ಟವಾಯಿತು. ಇವನ ಉಗ್ರತೆಯನ್ನು ಸಹಿಸುವ ಶಕ್ತಿ ಇರುವುದು ಆಂಜನೇಯನಿಗೆ ಮಾತ್ರವೆಂದು ಅರಿತು ಋತ್ವಿಜರು ಬ್ರಹ್ಮಾವರದ ಕುಕ್ಕುಡೆಗುಂಡಿಯಲ್ಲಿ ಪೂಜೆಗೊಳ್ಳುತ್ತಿದ್ದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ಎದುರಿನ ಒಂದು ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು. ನರಸಿಂಹ ಉಗ್ರತೆಯ ಉರಿಯನ್ನು ಸಹಿಸಲು ಸಾಧ್ಯವಾಗುವಂತೆೆ ಈ ಆಂಜನೇಯನ ವಿಗ್ರಹಕ್ಕೆ ಚಂದ್ರ (ಸಿಂಧೂರ) ಬೆಣ್ಣೆಯನ್ನು ಪ್ರತಿದಿನ ಲೇಪಿಸಲಾಗುತ್ತಿದೆ. ಇದರಿಂದ ಈ ಪ್ರದೇಶವು ಶಾಂತವಾಗಿ ಎಲ್ಲರೂ ನೆಮ್ಮದಿಗೊಳ್ಳುವಂತಾಯಿತು.
ಅAದಿನಿAದ ಶ್ರೀಆಂಜನೇಯನು ಭಕ್ತಾದಿಗಳಿಗೆ ಅನುಗ್ರಹಿಸುತ್ತಾ ಬಂದಿದ್ದು ಯಾವುದೇ ಶುಭಾರಂಭ ಅಥವಾ ದೂರ ಪ್ರಯಾಣ ಮಾಡುವ ಮೊದಲು ಬಹಳ ಹಿಂದಿನಿAದಲೂ ನಿರಂತರವಾಗಿ ಉರಿಯುತ್ತಿರುವ ಶ್ರೀಆಂಜನೇಯ ದೇವರ ನಂದಾದೀಪಗಳಿಗೆ ದೀಪದ ಎಣ್ಣೆ ಹಾಕುವುದು ಮತ್ತು ಸಂಜೆ ಮಹಾರಂಗಪೂಜೆ ಸೇವೆ ಮಾಡುವ ಸಂಪ್ರದಾಯವಿದೆ
ಆಣೆ ಪ್ರಮಾಣ ಮತ್ತು ತೀರ್ಮಾನ
ಶ್ರೀಕ್ಷೇತ್ರವು ನಂಬಿದ ಭಕ್ತರ ಪಾಲಿಗೆ ನ್ಯಾಯಲಯವಾಗಿದ್ದು ಪರಿಹಾರ ಒದಗಿಸುವ ತಾಣವಾಗಿತ್ತು. ಶ್ರೀಗುರುನರಸಿಂಹ ದೇವರಲ್ಲಿ ಪ್ರಮಾಣ ಮಾಡುವರು ಚಕ್ರತೀರ್ಥ ಮತ್ತು ಶಂಖತೀರ್ಥ ಸರೋವರದಲ್ಲಿ ಸ್ನಾನ ಮಾಡಿ ಒದ್ದೆಬಟ್ಟೆಯಲ್ಲಿ ಬಡಗು ಬದಿಯ ಬಾಗಿಲಿನಿಂದ ದೇವಸ್ಥಾನ ಪ್ರವೇಶಿಸಿ ಹೆಬ್ಬಾಗಿಲಿನ ದ್ವಾರದಲ್ಲಿದ್ದ ಎರಡೂ ಪ್ರಮಾಣ ಗಂಟೆಯನ್ನು ಬಾರಿಸಿ ದೇವರ ಗರ್ಭಗುಡಿಯ ಎದುರು ನಿಂತು ಆರು ದೀಪಗಳನ್ನು ಹಚ್ಚಿ ಪ್ರಮಾಣ ಮಾಡಿ ದೇವರ ಪ್ರಸಾದ ಸ್ವೀಕರಿಸದೆ ಹೆಬ್ಬಾಗಲಿನಿಂದ ಹೊರ ಹೋಗಬೇಕೆಂಬ ಕ್ರಮ ೧೯೫೦ರವರೆಗೂ ವಾಡಿಕೆಯಾಗಿ ನಡೆದುಕೊಂಡು ಬಂದಿತ್ತು,. ಕೋರ್ಟಿನಲ್ಲಿ ತಾನು ನರಸಿಂಹದೇವರೆದುರು ಪ್ರಮಾಣ ಮಾಡುತ್ತೇನೆ ಎಂದು ಹೇಳಿದಲ್ಲಿ ಕೋರ್ಟಿನ ಅಧಿಕಾರಿ ದೇವಸ್ಥಾನಕ್ಕೆ ಬಂದು ಅವರ sಸಮಕ್ಷಮದಲ್ಲಿ ಪ್ರಮಾಣ ಮಾಡಿಸುವ ಕ್ರಮವಿದ್ದಿತ್ತು. ನರಸಿಂಹನಲ್ಲಿ ಬಂದು ಪ್ರಾರ್ಥನೆ ಮಾಡಿ ಸೇವೆ ಸಲ್ಲಿಸಿದಲ್ಲಿ ಎಲ್ಲಿಯೂ ತೀರ್ಮಾನವಾಗದ ನ್ಯಾಯ ತೀರ್ಮಾನಗಳು, ವಾಕ್ ದೋಷಗಳು, ಕಲಹಗಳು, ಆಸ್ತಿ ವಿವಾದಗಳು, ಮಾಟ ಕೃತಿಮಗಳು ಇಲ್ಲಿ ನಿವಾರಣೆ ಆಗುತ್ತವೆಂಬ ನಂಬಿಕೆ ಇಂದು ಕೂಡ ಶ್ರೀಗುರುನರಸಿಂಹ ದೇವರ ಭಕ್ತರಲ್ಲಿ ಕಾಣಬಹುದಾಗಿದೆ.
ಐತಿಹಾಸಿಕ ಉಚ್ಛನ್ಯಾಯಾಲಯದ ತೀರ್ಪು
ಶ್ರೀದೇವಳವು ಕೂಟ ಬ್ರಾಹ್ಮಣರ ಸಮಾಜಕ್ಕೆ ಕುಲದೇವರು ಮತ್ತು ಗುರುಸ್ಥಾನವಾಗಿಯೂ, ಕೋಟೇಶ್ವರ ಬ್ರಾಹ್ಮಣರಿಗೆ ಕುಲದೇವರಾಗಿಯೂ ಹಾಗೂ ನಂಬಿದ ಸದ್ಭಕ್ತರಿಗೆ ಇಷ್ಟಾರ್ಥ ಸಿದ್ದಿ ಸ್ಥಳವಾಗಿರುವುದರಿಂದ ಮತ್ತು ಶ್ರೀಕ್ಷೇತ್ರದಲ್ಲಿ ಐತಿಹಾಸಿಕವಾಗಿ ಕೂಟಬ್ರಾಹ್ಮಣರು ನಡೆಸಿಕೊಂಡು ಬಂದಿರುವ ಕಟ್ಟುಕಟ್ಟಲೆ ಸೇವೆಗಳನ್ನು ಪರಿಶೀಲಿಸಿ ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಿಂದ ಬಿಡುಗಡೆಗೊಳಿಸಿ, ಕೋಟ ಬ್ರಾಹ್ಮಣರ ವರ್ಗಿಯ ದೇವಸ್ಥಾನವೆಂದು ಪರಿಗಣಿಸಿ, ಕೋಟಬ್ರಾಹ್ಮಣರ ಆಡಳಿತಕ್ಕೆ ಕೊಡುವಂತೆ ದಿನಾಂಕ ೧೬-೧೦-೧೯೮೪ರಲ್ಲಿ ಉಚ್ಛನ್ಯಾಲಯವು ಮಹತ್ವದ ಹಾಗೂ ಐತಿಹಾಸಿಕ ತೀರ್ಪನ್ನು ನೀಡಿತು. ಅದರ ಅನ್ವಯ ೧೯೯೫ರ ಲಾಗಯ್ತು ವಿವಿಧ ಭೌಗೋಳಿಕ ಕ್ಷೇತ್ರಗಳ ಕೂಟ ಸಮಾಜದವರಿಂದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಆಡಳಿತ ಮಂಡಳಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹತ್ತರ ಅಭಿವೃದ್ಧಿಗಳನ್ನು ಮತ್ತು ಬೃಹತ್ ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ.
ಶ್ರೀದೇವಳದ ನಿತ್ಯ ಪೂಜಾ ವಿವರ
ಶ್ರೀಗುರುನರಸಿಂಹ ದೇವರು
ಬೆಳಿಗ್ಗೆ ೪-೪೫ ರಿಂದ ಪೂಜೆ ಪ್ರಾರಂಭ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಪವಮಾನ ಸೂಕ್ತ ಪಾರಾಯಣ ಸಹಸ್ರನಾಮ ಪಾರಾಯಣ ನೈವೇದ್ಯ ೬-೩೦ಕ್ಕೆ ಮಹಾಪೂಜೆ ಮಹಾಮಂಗಳಾರತಿ, ಧನುರ್ಮಾಸದಲ್ಲಿ ಮಾಸ ಪರ್ಯಂತ ಬೆಳಗ್ಗಿನ ಪೂಜೆ ೪-೦೦ಕ್ಕೆ ಮಹಾಮಂಗಳಾರತಿ ಬೆಳಗ್ಗೆ ೫-೦೦ ಕ್ಕೆ
ಮಧ್ಯಾಹ್ನ ೧೧-೦೦ ಕ್ಕೆ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ಪವಮಾನ ಸೂಕ್ತಾಭಿಷೇಕ, ಸಹಸ್ರನಾಮ ಪಾರಾಯಣ, ಹರಿವಾಣ ನೈವೇದ್ಯ ಹಾಲುಪರಮಾನ್ನ ನೈವೇಧ್ಯ, ವಿಶೇಷ ದಿನಗಳಲ್ಲಿ ಸೇವಾಕರ್ತರು ಇದ್ದಲ್ಲಿ ಸಂಹಿತಾಭಿಷೇಕ, ಕ¯ಶಾಭಿಷೇಕ
ಮಕರ ಸಂಕ್ರಾAತಿಯಿAದ ಮಿಥುನ ಸಂಕ್ರಾತಿಯವರೆಗೆ ಸಂಕ್ರಾತಿಯ ದಿನದಂದು ಬೆಳಗ್ಗೆ ಗಣಹೋಮ, ಉತ್ಸವ ಬಲಿ, ರಜತ ರಥೋತ್ಸವ (ಶ್ರೀಆಂಜನೇಯ ದೇವಸ್ಥಾನದವರೆಗೆ)
ಕರ್ಕಾಟಕ ಸಂಕ್ರಾAತಿಯಿAದ ಧನುಸಂಕ್ರಾAತಿಯವರೆಗೆ ಸಂಕ್ರಾತಿಯ ದಿನದಂದು ಬೆಳಗ್ಗೆ ಗಣಹೋಮ, ಉತ್ಸವ ಬಲಿ,
೧೨-೦೦ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ೧-೦೦ಕ್ಕೆ ನಿತ್ಯ ಅನ್ನದಾನ
ಸಂಜೆ ೬-೩೦ಕ್ಕೆ ಬೈದಬಲಿ ಪೂಜೆ, ಮಂಗಳಾರತಿ, ಸ್ತಿçÃಸೂಕ್ತ ಅಭಿಷೇಕ ಸಂಜೆ ೭-೩೦ಕ್ಕೆ ನೈವೇಧ್ಯ, ಮಹಾಪೂಜೆ ಮಹಾಮಂಗಳಾರತಿ ಸಿಂಹಮಾಸದ ಪರ್ಯಂತ ಸೋಣೆ ಆರತಿ
ವಿಶೇಷ ದಿನಗಳಲ್ಲಿ ಸೇವಾಕರ್ತರು ಇದ್ದಲ್ಲಿ ಕಿರೇರಂಗಪೂಜೆ, ಹಿರೇರಂಗಪೂಜೆ, ಪುಷ್ಫ ರಥೋತ್ಸವ, ಬೆಳ್ಳಿ ರಥೋತ್ಸವ
ಶ್ರೀ ಆಂಜನೇಯ ದೇವರು
ಬೆಳಗ್ಗೆ ೫-೦೦ ರಿಂದ ಪಂಚಾಮೃತಾಭಿಷೇಕ, ಪವಮಾನ ಸೂಕ್ತ ಪಾರಾಯಣ, ಸುಂದರಕಾAಡ ಪಾರಾಯಣ ಸಿಂಧೂರ ಬೆಣ್ಣೆ ಮಿಶ್ರಿತ ಪೂರ್ಣಾಲಾಂಕರ, ನೈವೇಧ್ಯ, ಗಂಟೆ ೬-೩೦ರಿಂದ ಮಹಾಪೂಜೆ, ಮಹಾಮಂಗಳಾರತಿ
ಮಧ್ಯಾಹ್ನ ೧೧-೩೦ ಕ್ಕೆ ನೈವೇಧ್ಯ, ಮಂಗಳಾರತಿ ಸಂಜೆ ಸೇವಾಕರ್ತರು ಇದ್ದಲ್ಲಿ ಗಂಟೆ ೪-೩೦ರಿಂದ ೬-೩೦ ರವರೆಗೆ ರಂಗಪೂಜೆ, ಪ್ರತಿ ಹುಣ್ಣಿಮೆಯಂದು ನವಕಪ್ರಧಾನ ಹೋಮ ಸಹಿತ ಕಲಶಾಭಿಷೇಕ
ಶ್ರೀ ಗಣಪತಿ ದೇವರು
ಬೆಳಗ್ಗೆ ೫-೦೦ ರಿಂದ ಪ್ರಾರಂಭ, ಪಂಚಾಮೃತಾಭಿಷೇಕ, ಉಪನಿಷತ್ ಅಭಿಷೇಕ, ನೈವೇಧ್ಯ ೬-೦೦ ಕ್ಕೆ ಮಹಾಮಂಗಳಾರತಿ.
ಮಧ್ಯಾಹ್ನ ೧೧-೩೦ ಕ್ಕೆ ನೈವೇಧ್ಯ, ಮಂಗಳಾರತಿ ಸಂಜೆ ೬-೩೦ ಕ್ಕೆ ಅಲಂಕಾರ ಪೂಜೆ, ನೈವೇಧ್ಯ, ಮಹಾಮಂಗಳಾರತಿ,
ಸಂಜೆ ಸೇವಾಕರ್ತರು ಇದ್ದಲ್ಲಿ ರಂಗಪೂಜೆ, ಪ್ರತಿ ಸಂಕಷ್ಟಹರಚತುರ್ಥಿಯAದು ಬೆಳಗ್ಗೆ ಗಣಹೋಮ, ಸಂಜೆ ರಂಗಪೂಜೆ
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು
ಬೆಳಗ್ಗೆ ೫-೦೦ ರಿಂದ ಪೂಜಾ ಪ್ರಾರಂಭ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ನೈವೇಧ್ಯ ಗಂಟೆ ೬-೦೦ ಕ್ಕೆ ಮಹಾಮಂಗಳಾರತಿ ಮಧ್ಯಾಹ್ನ ೧೧-೩೦ಕ್ಕೆ ಕುಂಕುಮಾರ್ಚನೆ, ಹಾಲುಪರಮಾನ್ನ ನೈವೇಧ್ಯ, ಮಂಗಳಾರತಿ. ಸಂಜೆ ೬-೩೦ಕ್ಕೆ ಅಲಂಕಾರಪೂಜೆ, ಕುಂಕುಮಾರ್ಚನೆ, ನೈವೇಧ್ಯ, ಮಂಗಳಾರತಿ ಸಂಜೆ ಸೇವಾಕರ್ತರು ಇದ್ದಲ್ಲಿ ರಂಗಪೂಜೆ , ಪ್ರತಿ ಶುಕ್ರವಾರ ಬೆಳಿಗ್ಗೆ ಚಂಡಿಕಾ ಸಪ್ತಶತಿ ಪಾರಾಯಣ
ಶ್ರೀನಾಗದೇವರು
ಬೆಳಗ್ಗೆ ಪಂಚಾಮೃತಭಿಷೇಕ ಪೂರ್ವಕ ಪೂಜೆ, ಸೇವಾಕರ್ತರು ಇದ್ದಲ್ಲಿ ತನು ಇತ್ಯಾದಿ ವಿಶೇಷ ಸೇವೆ
ಪ್ರತಿ ಅಮವಾಸ್ಯೆ ಪಾಡ್ಯ ಶುದ್ಧ ಷಷ್ಠಿಯಂದು ಪವಮಾನ ಕಲಶಾಭಿಷೇಕ
ಶ್ರೀಗುರುನರಸಿಂಹ ದೇವರಿಗೆ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ಸೇವೆಗಳು
ಬ್ರಹ್ಮರಥೋತ್ಸವ :- ಮಕರ ಸಂಕ್ರಾAತಿಯ ದಿನ ದ್ವಜಾರೋಹಣ, ಸಂಕ್ರಾತಿAಯ ೨ನೇ ದಿನ ಬ್ರಹ್ಮರಥೋತ್ಸವ (ಜನವರಿ ೧೬) ೩ನೇ ದಿನ ಅವಭೃಥ ಸ್ನಾನ
ರಥಸಪ್ತಮಿ :- ಕುಂಭಮಾಸ ಶುಕ್ಲ ಸಪ್ತಮಿ ಬೆಳಿಗ್ಗೆ ಸಂಹಿತಾಭಿಷೇಕ. ಮಧ್ಯಾಹ್ನ ರಜತರಥೋತ್ಸವ
ಆಂಜನೇಯ ಜಯಂತಿ :- ಚೈತ್ರ ಮಾಸ-ಶುಕ್ಲ ಪೂರ್ಣಿಮಾ (ಚಿತ್ರಪೂರ್ಣಿಮೆ) ಬೆಳಗ್ಗೆ ಮಹಾಪಂಚಾಮೃತಾಭಿಷೇಕ ಪಂಚವಿAಶತಿ ಕಲಶಾಭಿಷೇಕ, ವೇದಪಾರಾಯಣ, ಸÀÀಂಜೆ ಮಹಾರಂಗಪೂಜೆ, ವಸಂತೋತ್ಸವ
ನರಸಿಂಹ ಜಯಂತಿ :- ವೈಶಾಖಮಾಸ ಶುಕ್ಲಪಕ್ಷ ಚತುದರ್ಶಿಯಂದು (ಸ್ವಾತಿ ನಕ್ಷತ್ರ) ಬೆಳಿಗ್ಗೆ ವೇದಪಾರಾಯಣ, ನರಸಿಂಹಹೋಮ, ಸಂಜೆ ೫-೩೦ ರಿಂದ ಮಹಾಪಂಚಾಮೃತಾಭಿಷೇಕ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ಸಣ್ಣಬೆಳ್ಳಿರಥೋತ್ಸವ (ದೇವಸ್ಥಾನದ ಒಳ ಪ್ರಾಂಗಾಣ) ವಸಂತೋತ್ಸವ ಹಿರಿರಂಗಪೂಜೆ, ಉತ್ಸವಬಲಿ, ಪುಷ್ಫರಥೋತ್ಸವ
ಸೀಯಾಳಾಭಿಷೇಕ :- ಮಿಥುನ ಸಂಕ್ರಾತಿಯ ದಿನ ಉತ್ತಮ ಮಳೆಬೆಳೆಗಾಗಿ ಪ್ರಾರ್ಥಿಸಿ ಭಕ್ತಾದಿಗಳಿಂದ ಸಂಗ್ರಹಿಸಿದ ಸಹಸ್ರ ಸಂಖ್ಯೆಗೂ ಅಧಿಕ ಸೀಯಾಳ ಅಭಿಷೇಕ
ಶ್ರಾವಣಮಾಸ :- ಭಕ್ತಾದಿಗಳು ಶ್ರಾವಣ ಶನಿವಾರದಂದು ವಿಶೇಷ ವೃತವನ್ನು ಆಚರಿಸಿ ಶ್ರೀದೇವರಿಗೆ ಸೇವೆ ಸಲ್ಲಿಸುವುದು ವಾಡಿಕೆ ಅದರಂತೆ ಈ ಶನಿವಾರಗಳಲ್ಲಿ ೩೦ಸಾವಿರಕ್ಕೂ ಅಧಿಕ ಭಕ್ತಾದಿಗಳು ಶ್ರೀದೇವಳಕ್ಕೆ ಭೇಟಿ ಸೇವೆ ಸಲ್ಲಿಸುತ್ತಾರೆ
ಸಿಂಹಮಾಸ ಕೃಷ್ಣ ಪಕ್ಷ ಅಷ್ಟಮಿ :- ರಾತ್ರಿ ಕೃಷ್ಣ ಜನ್ಮಾಷ್ಠಮಿ ಆಚರಣೆ ಮರುದಿನ ವಿಟ್ಲಪಿಂಡಿ ಉತ್ಸವ ಸಂಜೆ ವಿಶೇಷಪೂಜೆ ಎಡಬೆಟ್ಟು ಶ್ರೀಗೋಪಾಲಕೃಷ್ಣದೇವಳದವರೆಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ, ಅಷ್ಟಾವಧಾನ ಸೇವೆ, ಕಟ್ಟೆಓಲಗ, ಪುರಮೆರವಣಿಗೆ ಸಿಂಹಮಾಸದ ಒಂದು ತಿಂಗಳು ಸಂಜೆ ಸೋಣೆ ಆರತಿ,
ಮಹಾಚೌತಿ :- ಗಣೇಶ ಚತುರ್ಥೀಯಂದು ೧೨೦ಕಾಯಿಗಣಹೋಮ, ನರಸಿಂಹಹೋಮ, ಮೂಡುಗಣಪತಿ ಸೇವೆ, ಸಂಜೆ ಶ್ರೀಗಣಪತಿ ದೇವರಿಗೆ ರಂಗಪೂಜೆ, ಶ್ರೀನರಸಿಂಹ ದೇವರಿಗೆ ಕಿರಿರಂಗಪೂಜೆ ಉತ್ಸವಬಲಿ
ನವರಾತ್ರಿ :- ನವರಾತ್ರಿಯ ಪ್ರತಿ ದಿನ ಚಂಡಿಕಾ ಸಪ್ತಶತೀಪಾರಾಯಣ, ದುರ್ಗಾಪರಮೇಶ್ವರೀ ಅಮ್ಮನವರಿಗೆ ಬೆಳಿಗ್ಗೆ ಪೂರ್ಣಾಲಾಂಕರ, ಸಂಜೆ ೬-೦೦ಕ್ಕೆ ಮಹಾರಂಗಪೂಜೆ (ಹುಣ್ಣಿಮೆ ತನಕ) ೨ನೇ ನವರಾತ್ರಿ ದಿನ ಕದಿರುಕಟ್ಟುವುದು.
ದೀಪಾವಳಿ :- ಸಂಜೆ ಬಲೀಂದ್ರಪೂಜೆ, ಮಾರನೇ ದಿನ ಗೋಪೂಜೆ
ತುಳಸಿ ಪೂಜೆ :- ಉತ್ಥಾನ ದ್ವಾದಶೀ, ಕ್ಷೀರಾಬ್ಧಿ, ತುಲಸೀ ಪೂಜಾ
ವಿಶ್ವರೂಪ ದರ್ಶನ :- ಕಾರ್ತಿಕ ಅಮವಾಸ್ಯೆಯ ಹಿಂದಿನ ಶನಿವಾರ ಬೆಳಿಗ್ಗೆ ೫-೦೦ಕ್ಕೆ ಹಣತೆ ದೀಪಗಳಲ್ಲಿ ದೀಪವನ್ನು ಬೆಳಗಿ ಶ್ರೀದೇವರೆಗೆ ವಿಶೇಷಪೂಜೆ, ನೈವೇಧ್ಯ ಮತ್ತು ಮಹಾಮಂಗಳಾರತಿಯ ದಿವ್ಯಬೆಳಕಿನಲ್ಲಿ ಶ್ರೀಗುರುನರಸಿಂಹ ದೇವರ ದಿವ್ಯ ದರ್ಶನವನ್ನು ಭಕ್ತಾದಿಗಳು ಪಡೆಯುತ್ತಾರೆ
ದೀಪೋತ್ಸವ : ಕಾರ್ತಿಕ ಅಮವಾಸ್ಯೆಯ ದಿನದ ಸಂಜೆ ೭.೦೦ ರಿಂದ, ಮಹಾಪೂಜೆ, ದೀಪೋತ್ಸವ ವಸಂತೋತ್ಸವ, ಹಿರೇರಂಗಪೂಜೆ, ಪುಷ್ಪರಥೋತ್ಸವ, ತೆಪ್ಪೋತ್ಸವ
ಮಹಾಮೂಡುಗಣಪತಿ ಮತ್ತು ಮನೆಯಕ್ಕಿ ಸಮಾರಾಧನೆ :- (ಕೊಟೇಶ್ವರ ಕೋಡಿಹಬ್ಬದ ದಿನ) ಕೋಟ ಹದಿನಾಲ್ಕು ಗ್ರಾಮದವರಿಂದ ಸಂಗ್ರಹಿಸಿದ ಅಕ್ಕಿ ಕಾಯಿ, ಧವಸ ಧಾನ್ಯಗಳಿಂದ ವೃಶ್ಚಿಕ ಮಾಸ ಹುಣ್ಣಿಮೆಯ ಸಂಜೆ ಸಾವಿರಕಾಯಿ ಮಹಾಮೂಡುಗಣಪತಿ ಸೇವೆ, ಮರುದಿನ ಮಧ್ಯಾಹ್ನ ಮನೆಯಕ್ಕಿ ಸಮಾರಾಧನೆ ಮಾಡಿ ಶ್ರೀದೇವರಿಗೆ ಸಮರ್ಪಣೆ
ಧರ್ನುಮಾಸ :- ಒಂದು ಮಾಸ ಪರ್ಯಂತ ಬೆಳಿಗ್ಗೆ ಹುಗ್ಗಿ ನೈವೇಧ್ಯ ೫-೦೦ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ
ಸಮಾರಾಧನೆ ಸೇವೆ (ಅನ್ನಸಂತರ್ಪಣೆ)
ವಿಶೇಷ ಪೂಜೆ :- ಹಿರೇ ರಂಗಪೂಜೆ, ಕಿರೇ ರಂಗಪೂಜೆ, ಸಂಹಿತಾಭಿಷೇಕ, ತುಲಾಭಾರ, ನರಸಿಂಹ ಹೋಮ, ಗಣಹೋಮ, ಸಮಾರಾಧನೆ, ಮೂಡುಗಣಪತಿ ಸೇವೆ, ಹೂವಿನ ಪೂಜೆ, ಸರ್ವಸೇವೆ, ಹರಿವಾಣ ನೈವೇಧ್ಯ ಇತ್ಯಾದಿ…
ಶ್ರೀದೇವರಿಗೆ ನಡೆಸಲಾಗುವ ವಿಶೇಷ ಸೇವೆಗಳು ಮತ್ತು ಅದರ ಫಲಗಳು
ಹಿರೇರಂಗಪೂಜೆ, ಕಿರೇರಂಗಪೂಜೆ :- ಸಕಲದುರಿತ ನಿವಾರಣೆ, ಸರ್ವಕಾಮ್ಯಾರ್ಥ ಸಿದ್ಧಿ, ಜನ್ಮಾಂತರ ದೋಷ ನಿವಾರಣೆ ಪೂರಕ ಪುಣ್ಯಫಲ ಪ್ರಾಪ್ತಿ, ವಿವಾಹ ಇತರೇ ಮಂಗಳ ಕಾರ್ಯ ಪ್ರಾಪ್ತಿ ಒಳ್ಳೆ ಉದ್ಯೋಗ, ಭಡ್ತಿ, ಉನ್ನತ ಸ್ಥಾನ ಪ್ರಾಪ್ತಿ , ಜಾಗಖರೀದಿ, ಗೃಹನಿರ್ಮಾಣ ಇತ್ಯಾದಿ
ಸಂಹಿತಾಭಿಷೇಕ :- ಗ್ರಹದೋಷ ನಿವಾರಣೆ, ಶ್ರೇಯೋಭಿವೃದ್ಧಿ, ಧನಾಭಿವೃದ್ಧಿ
ಸಮಾರಾಧನೆ ಸೇವೆ :- ಅನ್ನದಾನಫಲ, ಆರೋಗ್ಯ ಪ್ರಾಪ್ತಿ
ಹರಿವಾಣ ನೈವೇಧ್ಯ, ಫಲಪಂಚಾಮೃತಾಭಿಷೇಕ :- ಸರ್ವರೋಗ ನಿವಾರಣೆ ಸಹಿತ ಆಯುರಾರೋಗ್ಯ, ಧನಸಂಪತ್ತು ಪ್ರಾಪ್ತಿ
ಪವಮಾನಾಭಿಷೇಕ :- ವಾರ್ಷಿಕ ಸಕಲ ಪಾಪ ನಿವೃತ್ತಿ
ಕ್ಷೀರಾಭಿಷೇಕ :- ಪಾಪನಿವಾರಣೆ, ನೆಮ್ಮದಿಪ್ರಾಪ್ತಿ
ರುದ್ರಾಭಿಷೇಕ :- ಧನಭಾಗ್ಯ, ಶಾಂತಿವೃದ್ಧಿ, ಶತ್ರುಭೀತಿ ನಿವಾರಣೆ
ಸಹಸ್ರನಾಮಾ ಪಾರಾಯಣ :- ದುರಿತಗಳ ನಾಶ, ಶನಿದೋಷ ನಿವೃತ್ತಿ
ಹಾಲುಪರಮಾನ್ನ ನೈವೇಧ್ಯ :- ಉದರಶೂಲಾದಿ ರೋಗ ನಿವೃತ್ತಿ, ಮಕ್ಕಳಿಗೆ ಉನ್ನತ ವಿಧ್ಯಾಭ್ಯಾಸ ಪ್ರಾಪ್ತಿ
ದಧ್ಯನ್ನ ನೈವೇಧ್ಯ :- ವಾತದೋಷ ನಿವಾರಣೆ ಆಯುವೃದ್ಧಿ
ಚಿತ್ರಾನ್ನ ನೈವೇಧ್ಯ :- ಸಕಲ ಭೀತಿ ನಿವಾರಣೆ
ಪಾನಕ ನೈವೇಧ್ಯ :- ದಾಹಜ್ವರಾದಿ ರೋಗ ನಿವಾರಣೆ
ಮೂಡುಗಣಪತಿ ಸೇವೆ :- ಸಕಲ ವಿಘ್ನ ನಿವಾರಣೆ
ಸೋಣೆ ಆರತಿ (ಸಿಂಹ ಮಾಸದಲ್ಲಿ ಮಾತ್ರ) :- ತೇಜೋವೃದ್ಧಿ, ವಿದ್ಯಾಯಶೋವೃದ್ಧಿ
ಹೂವಿನಪೂಜೆ :- ಸುಖಶಾಂತಿ ಪ್ರಾಪ್ತಿ
ತುಲಾಭಾರ :- ಸಂತಾನ ಪ್ರಾಪ್ತಿ, ಆರೋಗ್ಯ ಆಯುಷ್ಯಲಾಭ,
ನಂದಾದೀಪ :- ಪಾಪನಾಶ
ಉಪನೀಷತ್ ಅಭಿಷೇಕ :- ಕಾರ್ಯಸಿದ್ಧಿ
ನರಸಿಂಹ ಹೋಮ :- ಇಷ್ಟಾರ್ಥ ಸಿದ್ಧಿ
ಮನ್ಯುಸೂಕ್ತ ಅಭಿಷೇಕ :- ಶತ್ರುನಾಶ, ಮಾಟ ಕೃತಿಮ ನಿವಾರಣೆ, ವಿವಾದ ಇತರೇ ಕಲಹಗಳ ನಿವಾರಣೆ
ಶ್ರೀಆಂಜನೇಯ ದೇವರಿಗೆ ನಡೆಯುವ ವಿಶೇಷ ಸೇವೆಗಳ ಫಲ
ಸುಂದರಕಾAಡ ಪಾರಾಯಣ :- ವಿವಾಹ ಭಾಗ್ಯ, ಉದ್ಯೋಗ ಭಾಗ್ಯ ಕಾರ್ಯಸಿದ್ಧಿ, ವಿದ್ಯಾಯಶೋವೃದ್ಧಿ
ಪೂರ್ಣಾಲಾಂಕರ :- ಇಷ್ಟಾರ್ಥ ಸಿದ್ಧಿ, ಆಯುರಾರೋಗ್ಯ ಪ್ರಾಪ್ತಿ, ದುರಿತಗಳ ನಾಶ,
ರಂಗಪೂಜೆ : – ದುರಿತಗಳ ನಾಶ, ಶನಿದೋಷ ನಿವೃತ್ತಿ, ಸಕಲದುರಿತ ನಿವಾರಣೆ, ಇಷ್ಟಾರ್ಥ ಸಿದ್ಧಿ, ಉದ್ಯೋಗ ಪ್ರಾಪ್ತಿ, ಭಡ್ತಿ, ವಿವಾಹ ಭಾಗ್ಯ ಸರ್ವಕಾಮ್ಯಾರ್ಥ ಸಿದ್ಧಿ, ಶತ್ರುನಾಶ,