ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ
ಶ್ರೀ ಹನುಮಜ್ಜಯಂತಿ :- ಏಪ್ರೀಲ್ 16ರ ಶನಿವಾರ ಚಿತ್ರಪೂರ್ಣಿಮೆಯಂದು ಹನುಮಜ್ಜಯಂತಿ ಆಚರಣೆ ಪ್ರಯುಕ್ತ ಶ್ರೀಆಂಜನೇಯನ ಸನ್ನಿಧಾನದಲ್ಲಿ ಬೆಳಿಗ್ಗೆ 5ರಿಂದ ಪಂಚವಿಂಶತಿ ಕಲಶಾಭಿಷೇಕ, ಹೋಮ, ಮಹಾಪಂಚಾಮೃತಾಭಿಷೇಕ ಮಹಾಪೂಜೆಯನ್ನು ನೆರವೇರಿಸಲಾಯಿತು ನಂತರ ಸಂಜೆ 6-00ರಿಂದ ಮಹಾರಂಗಪೂಜೆಯನ್ನು ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ತಂತ್ರಿಗಳಾದ ವೇ. ಮೂ. ಕೃಷ್ಣ ಸೋಮಯಾಜಿಯವರು ಮತ್ತು ಅರ್ಚಕರಾದ ವೇ.ಮೂ. ಶ್ರೀನಿವಾಸ ಅಡಿಗರು ಧಾರ್ಮಿಕ ವಿಧಿವಿಧಾನಗಳನ್ನು ಸಹ ಋತ್ವಿಜರೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದರು. ಆಡಳಿತಮಂಡಳಿಯ ಕಾರ್ಯದರ್ಶಿಯವಾದ ಶ್ರೀ ಪಿ. ಲಕ್ಷ್ಮೀನಾರಾಯಣ ತುಂಗರು ಉಪಸ್ಥಿತರಿದ್ದರು.
ಶ್ರೀ ನೃಸಿಂಹ ಜಯಂತಿ :- ಮೇ 14ರ ಶನಿವಾರದಂದು ಶ್ರೀ ನರಸಿಂಹ ಜಯಂತಿಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಶ್ರೀಗುರುನರಸಿಂಹ ದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ಹೋಮ, ಸಹಸ್ರ ಸಂಖ್ಯೆಯಲ್ಲಿ ನರಸಿಂಹ ಹೋಮ, ವೇದಪಾರಾಯಣ, ಮಧ್ಯಾಹ್ನ ಮಹಾಪೂಜೆಯನ್ನು ನೆರವೇರಿಸಲಾಯಿತು. ಸಂಜೆ 5-30ರಿಂದ ಶ್ರೀದೇವರಿಗೆ ಮಹಾಪಂಚಾಮೃತಾಭಿಷೇಕ, ಉತ್ಸವದೊಂದಿಗೆ ಓಲಗಮಂಟ ಸೇವೆ, ಶ್ರೀದೇವಳದ ಒಳ ಪ್ರಾಂಗಣದಲ್ಲಿ ರಜತ ರಥೋತ್ಸವವನ್ನು ನೆರವೇರಿಸಲಾಯಿತು. ನಂತರ ಹಿರೇರಂಗಪೂಜೆ, ಉತ್ಸವಬಲಿಯನ್ನು ಮಾಡಿ ಶ್ರೀ ಆಂಜನೇಯನ ಸನ್ನಿಧಾನದವರೆಗೆ ಪುಷ್ಫರಥೋತ್ಸವವನ್ನು ನೆರವೇರಿಸಲಾಯಿತು. ತಂತ್ರಿಗಳಾದ ವೇ. ಮೂ. ಕೃಷ್ಣ ಸೋಮಯಾಜಿಯವರು ಮತ್ತು ಅರ್ಚಕರಾದ ವೇ.ಮೂ. ಶ್ರೀನಿವಾಸ ಅಡಿಗರು ಧಾರ್ಮಿಕ ವಿಧಿವಿಧಾನಗಳನ್ನು ಸಹ ಋತ್ವಿಜರೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದರು. ಆಡಳಿತಮಂಡಳಿಯ ಅಧ್ಯಕ್ಷರಾದ ಡಾ ಕೆ.ಎಸ್. ಕಾರಂತರು, ಕಾರ್ಯದರ್ಶಿಯವರಾದ ಶ್ರೀ ಪಿ. ಲಕ್ಷ್ಮೀನಾರಾಯಣ ತುಂಗರು ಮತ್ತು ಕೋಶಾಧಿಕಾರಿ ವೇ.ಮೂ. ಪರಶುರಾಮ ಭಟ್ಟರು ಉಪಸ್ಥಿತರಿದ್ದರು. ಅಂದು ಸಂಜೆ 6-30 ರಿಂದ ಶ್ರೀಗುರುಪ್ರಸಾದಿತ ಯಕ್ಷಗಾನ ಮೇಳ ಸಾಲಿಗ್ರಾಮ ಇವರಿಂದ ಸೇವಾರೂಪದಲ್ಲಿ ಕಾಲಮಿತಿ : ಭೀಷ್ಮ ಪ್ರತಿಜ್ಞೆ ಯಕ್ಷಗಾನ ಪ್ರಸಂಗವನ್ನು ಪ್ರದರ್ಶನವನ್ನು ಮಾಡಿದರು.
ಸೀಯಾಳ ಅಭಿಷೇಕ : – ಜೂನ್ 15ರ ಮಿಥುನ ಸಂಕ್ರಮಣದಂದು ಉತ್ತಮ ಮಳೆ ಬೆಳೆಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿ ಸಾರ್ವಜನಿಕ ನೆಲೆಯಲ್ಲಿ ಶ್ರೀಗುರುನರಸಿಂಹ ಮತ್ತು ಪರಿವಾರ ದೇವತೆಗಳಿಗೆ ಸೀಯಾಳ ಅಭಿಷೇಕವನ್ನು ಪ್ರತಿವರ್ಷದಂತೆ ಅರ್ಚಕರಾದ ವೇ.ಮೂ. ಜನಾರ್ದನ ಅಡಿಗರ ಸಹಕಾರದೊಂದಿಗೆ ನೆರವೇರಿಸಲಾಯಿತು. ಆಡಳಿತಮಂಡಳಿಯ ಅಧ್ಯಕ್ಷರಾದ ಡಾ ಕೆ.ಎಸ್. ಕಾರಂತರು, ಕಾರ್ಯದರ್ಶಿಯವರಾದ ಶ್ರೀ ಪಿ. ಲಕ್ಷ್ಮೀನಾರಾಯಣ ತುಂಗರು ಮತ್ತು ಕೋಶಾಧಿಕಾರಿ ವೇ.ಮೂ. ಪರಶುರಾಮ ಭಟ್ಟರು, ಗ್ರಾಮಮೊಕ್ತೇಸರರು, ಕೂ.ಮ.ಜ. ಸಾಲಿಗ್ರಾಮ ಅಂಗಸಂಸ್ಥೆಯ ಸದಸ್ಯರು ಮತ್ತು ಮುಂತಾದವರು ಉಪಸ್ಥಿತರಿದ್ದರು.
ಬ್ಯಾರಿಕೇಡ್ ಸಮರ್ಪಣೆ : ಎನ್ಎಚ್66ನಲ್ಲಿ ತಪ್ಪಿಸಬಹುದಾದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು ಜನರು ರಸ್ತೆ ದಾಟುವಾಗ ಜಾಗರೂಕರಾಗಿರಬೇಕೆಂದು ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ ಅಧ್ಯಕ್ಷ ಡಾ. ಕೆ.ಎಸ್ ಕಾರಂತರು ಹೇಳಿದರು. ದೇವಳದ ವತಿಯಿಂದ ಕೊಡ ಮಾಡಿದ ರಸ್ತೆ ತಡೆ (ಬ್ಯಾರಿಕೇಡ್)ಗಳನ್ನು ತರಬೇತಿಯಲ್ಲಿರುವ ಕೋಟ ಅರಕ್ಷಕ ಠಾಣೆಯ ಠಾಣಾಧಿಕಾರಿ ಶ್ರೀ ಪುನೀತರು ಸ್ವಿಕರಿಸಿದರು, ಈ ಸಂಧರ್ಭದಲ್ಲಿ ಕಾರ್ಯದರ್ಶಿಯವರಾದ ಶ್ರೀ ಪಿ. ಲಕ್ಷ್ಮೀನಾರಾಯಣ ತುಂಗರು ಮತ್ತು ಕೋಶಾಧಿಕಾರಿ ವೇ.ಮೂ. ಪರಶುರಾಮ ಭಟ್ಟರು ಮತ್ತು ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀಗುರುನರಸಿಂಹ ನಿಗಮಾಗಮ ವೇದ ಪಾಠಶಾಲೆ :- ಶ್ರೀದೇವಳದ ನಿಗಮಾಗಮ ಪಾಠಶಾಲೆಯಲ್ಲಿ ಋಗ್ವೇದ ಅಧ್ಯಯನದ ತರಗತಿಗಳು ಇದೇ ಜೂನ್ 15ರಿಂದ ಪ್ರಾರಂಭಗೊಂಡಿದ್ದು ಸೇರಲಿಚ್ಚಿಸುವ ವಿಪ್ರ ವಟುಗಳು ಕೂಡಲೇ ಶ್ರೀದೇವಳದ ಕಛೇರಿಯನ್ನು 9449545714ನ್ನು ಸಂಪರ್ಕಿಸಬಹುದಾಗಿದೆ. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ನಡೆಸುವ ಋಗ್ವೇದದಲ್ಲಿ ಪ್ರಥಮ, ಪ್ರವೇಶ ಮತ್ತು ಮೂಲ ಪರೀಕ್ಷೆಗಳ ತರಬೇತಿಯೊಂದಿಗೆ ಅಶ್ವಲಾಯನ ಪೂರ್ವಾಪರ ಪ್ರಯೋಗಗಳ ತರಬೇತಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ವ್ಯವಸ್ಥೆಯೊಂದಿಗೆ ಶಿಷ್ಯವೇತನವನ್ನು ನೀಡಲಾಗುವುದು.
ಹಿರಿಯ ಮತ್ತು ಕಿರಿಯರಿಗೆ ವೇದ ಅಧ್ಯಯನ :- ಪ್ರತಿ ದಿನ ಸಂಜೆ 5-00 ರಿಂದ 6-30ರವರೆಗೆ ಉಪನಯನವಾದ ಕಿರಿಯ ವಯಸ್ಸಿನ ವಟುಗಳಿಂದ ಹಿರಿಯ ವಯಸ್ಸಿನ ವಿಪ್ರರಿಗೆ ಸಂಧ್ಯಾವಂದನೆ, ಪೂಜೆ ಸೂಕ್ತಾದಿಗಳ ವೇದ ತರಗತಿಗಳು ಇದೇ ಜುಲೈ-1 ರಿಂದ ಪ್ರಾರಂಭಗೊಂಡಿದ್ದು ಸೇರಲಿಚ್ಚಿಸುವರು ಕೂಡಲೇ ಶ್ರೀದೇವಳದ ಕಛೇರಿಯನ್ನು 9449545714ನ್ನು ಸಂಪರ್ಕಿಸಬಹುದಾಗಿದೆ.
ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ವೇ.ಮೂ. ಎಡಬೆಟ್ಟು ಪರಶುರಾಮ ಭಟ್ಟರು ವಿಶೇಷ ಆಹ್ವಾನದ ಮೇರೆಗೆ ಪ್ರಯಾಗದ ಬಡೇ ಹನುಮಾನ್ ದೇವಸ್ಥಾನದಲ್ಲಿ ಹನುಮಜ್ಜಯಂತಿಯ ಶುಭ ಸಂಧರ್ಭದಲ್ಲಿ ಕಲಾಶಾಭಿಷೇಕ ಮತ್ತು ಮೂಲ ಮಂತ್ರ ಹೋಮ ಕಾರ್ಯಕ್ರಮದಲ್ಲಿ ಋತ್ವಿರಾಗಿ ಭಾಗವಹಿಸಿದ್ದಾರೆ.
ದೇಣಿಗೆ :- ಶ್ರೀದೇವಳಕ್ಕೆ ಲಕ್ಷಕ್ಕೆ ಮಿಕ್ಕಿ ದೇಣಿಗೆಯನ್ನು ನೀಡಿದ ಭಕ್ತರ ವಿವರ
ದಿನಾಂಕ 01-04-2021 ರಿಂದ 30-06-2022 ರವರೆಗೆ
ಶ್ರೀಮತಿ ಪಿ.ಕೆ. ಲಕ್ಷ್ಮೀದೇವಿ ಹೇರ್ಳೆ, ಶ್ರೀ ಕಾಸರವಳ್ಳಿ ಎನ್. ನಾಗರಾಜ ರಾವ್, ಶಿವಮೊಗ್ಗ
ಶ್ರೀ ಸಂಜಯ ಜಿ. ನಾವಡ, ಸಿಎ. ಯುಎಸ್ಎ
ಶ್ರೀ ಐರೋಡಿ ಸತ್ಯಾನಂದ ಕಾರಂತ, ಬೆಂಗಳೂರು
ಶ್ರೀ ಕೆ.ಜಿ. ರಾಮಕೃಷ್ಣ ರಾವ್, ಶ್ರೀಮತಿ ಎನ್.ಎಸ್. ರಾಜಲಕ್ಷ್ಮೀ, ಕೊಪ್ಪ
ಶ್ರೀಮತಿ ಮಂಜುಳಾ ಮಯ್ಯ, ಶ್ರೀ ಜಿ. ಪ್ರಕಾಶ ಮಯ್ಯ, ಬೆಂಗಳೂರು
ಶ್ರೀ ಉಪ್ಪುಂದ ನಾರಾಯಣ ಐತಾಳ, ಮುಂಬೈ
ಶ್ರೀಮತಿ ನಿರ್ಮಲಾ ಹಂದೆ, ಮಂಗಳೂರು
ಶ್ರೀ ಹರೀಶ ಹಂದೆ ಬೆಂಗಳೂರು
ಶ್ರೀ ಬಿ. ಕಿರಣ ಐತಾಳ, ಶ್ರೀ ಬಿ. ನಾರಾಯಣ ಐತಾಳ, ಬೆಂಗಳೂರು
ಶ್ರೀಮತಿ ಕೆ.ಎಸ್. ನಂದಿನಿ, ಬೆಂಗಳೂರು
ಶ್ರೀ ರಮೇಶ ಕಾರಂತ ಉಳವಿ, ಶಿವಮೊಗ್ಗ
ಶ್ರೀಮತಿ ವಸಂತಿ ಆನಂದರಾಮ ರಾವ್, ಡಾ. ನಿರಂಜನ ರಾವ್. ಬಾರಕೂರು
ಸಿ.ಎ. ಮುರಳೀಧರ ಕೆ. ಕಾರಂತ, ಶ್ರೀಮತಿ ಶಾಂತಲಾ ಕಾರಂತ, ಶ್ರೀ ಮುಖೇಶ ಕಾರಂತ ಬೆಂಗಳೂರು
ಅಕ್ಷತಾ ನಾಗಭೂಷಣ ಐತಾಳ, ಅವ್ಯುಕ್ತ ನಾಗಭೂಷಣ ಐತಾಳ, ಉಪ್ಪಿನಕುದ್ರು, ಕುಂದಾಪುರ
ಶ್ರೀ ರಾಘವೇಂದ್ರಾಚಾರ್ ಬೆಂಗಳೂರು : ಚಿನ್ನ ಕಟ್ಟಿಸಿದ ಪೂಜಾ ಅಭಿಷೇಕ ಶಂಖ
ಶ್ರೀಮತಿ ಗಂಗಾ ಕಾರಂತ, ಬೆಂಗಳೂರು
ಶ್ರೀ ಕೆ. ಕೃಷ್ಣ ಕಾರಂತ ಭದ್ರಾವತಿ
ಶ್ರೀಮತಿ ನೇತ್ರಾವತಿ ಮಧ್ಯಸ್ಥ, ಶ್ರೀ ಕೆ. ವಾಸುದೇವ ಮಧ್ಯಸ್ಥ, ಬೆಂಗಳೂರು,
ಶ್ರೀ ಜಿ.ಎಸ್. ಶಾಂತಿರಾಜ್ ಹೇರ್ಳೆ, ಬೆಂಗಳೂರು
ಶ್ರೀ ದೇವಳದ ಕಟ್ಟುಕಟ್ಟುಳೆ ಧಾರ್ಮಿಕ ಕಾರ್ಯಕ್ರಮಗಳ ಮುನ್ನೋಟ :
17-07-2022 ರವಿ ಕರ್ಕಾಟಕ ಸಂಕ್ರಾಂತಿ, ಗಣಹೋಮ, ಶ್ರೀಗಣಪತಿ ಅಥರ್ವಶೀರ್ಷ ಹೋಮ, ಉತ್ಸವಬಲಿ
30-07-2022 ಶನಿ ಪ್ರಥಮ ಶ್ರಾವಣ ಶನಿವಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
02-08-2022 ಮಂಗಳ ನಾಗರಪಂಚಮೀ, ಶ್ರೀನಾಗದೇವರಿಗೆ ಪವಮಾನಕಲಶಾಭಿಷೇಕ, ತನು ತಂಬಿಲ ಸೇವೆ
05-08-2022 ಶುಕ್ರ ವರಮಹಾಲಕ್ಷ್ಮೀವ್ರತ, ಸಂಜೆ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ರಂಗಪೂಜೆ
06-08-2022 ಶನಿ ದ್ವಿತೀಯ ಶ್ರಾವಣ ಶನಿವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
11-08-2022 ಗುರು ಚಾಂದ್ರ ಋಗುಪಾಕರ್ಮ, ಯಜುರುಪಾಕರ್ಮ
13-08-2022 ಶನಿ ತೃತೀಯ ಶ್ರಾವಣ ಶನಿವಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
17-08-2022 ಬುಧ ಸಿಂಹ ಸಂಕ್ರಮಣ, ಗಣಹೋಮ, ಉತ್ಸವಬಲಿ (1.ಮಾಸಪರ್ಯಂತ ಸಂಜೆ6-00ಕ್ಕೆ ಸೋಣೆಆರತಿ ಸೇವೆ)
18-08-2022 ಗುರು ಶ್ರೀಕೃಷ್ಣ ಜನ್ಮಾಷ್ಟಮಿ, ಸಂಜೆ 7-30ರಿಂದ ಮಹಾಪಂಚಾಮೃತಾಭಿಷೇಕ, ಮಹಾಪೂಜೆ
20-08-2022 ಶನಿ ವಿಟ್ಲಪಿಂಡಿ ಉತ್ಸವ ಸಂಜೆ ವಿಶೇಷಪೂಜೆ ಎಡಬೆಟ್ಟು ಶ್ರೀಗೋಪಾಲಕೃಷ್ಣದೇವಳದವರೆಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ, ಅಷ್ಟಾವಧಾನ ಸೇವೆ, ಕಟ್ಟೆಓಲಗ, ಪುರಮೆರವಣಿಗೆ (ನಮ್ಮ ದೇವಳದ ಸಂಪ್ರದಾಯದ ಪ್ರಕಾರ ಶುಕ್ರವಾರ ಮೊಸರುಕುಡಿಕೆ ಉತ್ಸವ ಆಚರಣೆ ಮಾಡುವುದಿಲ್ಲ )
20-08-2022ಶನಿ ಚತುರ್ಥ ಶ್ರಾವಣ ಶನಿವಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
27-08-2022 ಶನಿ ಪಂಚಮ (ಕೊನೆಯ) ಶ್ರಾವಣ ಶನಿವಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
30-08-2022 ಮಂಗಳ ಗೌರೀಹಬ್ಬ ಸಂಜೆ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರಿಗೆ ರಂಗಪೂಜೆ
31-08-2022 ಬುಧ ಶ್ರೀಗಣೇಶ ಚತುರ್ಥಿ 120ಕಾಯಿಗಣಹೋಮ, ನರಸಿಂಹಹೋಮ, ಮೂಡುಗಣಪತಿ ಸೇವೆ, ಸಂಜೆ ಶ್ರೀಗಣಪತಿ ದೇವರಿಗೆ ರಂಗಪೂಜೆ, ಶ್ರೀನರಸಿಂಹ ದೇವರಿಗೆ ಕಿರಿರಂಗಪೂಜೆ ಉತ್ಸವಬಲಿ
08-09-2022 ಗುರು ಸೌರ ಋಗುಪಾಕರ್ಮ (ಬೆಳಿಗ್ಗೆ 8-00ಕ್ಕೆ )
09-09-2022 ಶುಕ್ರ ಅನಂತಚತುರ್ದಶಿ
10-09-2022 ಶನಿ ಪವಿತ್ರಾರೋಪಣ (ಶ್ರೀದೇವರಿಗೆ), ಹುಣ್ಣಿಮೆ
17-09-2022 ಶನಿ ಕನ್ಯಾ ಸಂಕ್ರಮಣ ಗಣಹೋಮ ಉತ್ಸವಬಲಿ
26-09-2022 ಸೋಮ ನವರಾತ್ರಿ ಆರಂಭ, ನವರಾತ್ರಿಯ ಪ್ರತಿ ದಿನ ಚಂಡಿಕಾ ಸಪ್ತಶತೀಪಾರಾಯಣ, ದುರ್ಗಾಪರಮೇಶ್ವರೀ ಅಮ್ಮನವರಿಗೆ ಬೆಳಿಗ್ಗೆ ಪೂರ್ಣಾಲಾಂಕರ ಸಂಜೆ 6-00ಕ್ಕೆ ರಂಗಪೂಜೆ (ಹುಣ್ಣಿಮೆಯವರೆಗೆ )
26-09-2022 ಸೋಮ 1ನೇ ನವರಾತ್ರಿ ಧಾನ್ಯ ಸಂಗ್ರಹ, ಕದಿರು ಕಟ್ಟುವುದು
05-10-2022 ಬುಧ ವಿಜಯದಶಮಿ ಆಯುಧಪೂಜಾ, ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ, ಆಯುಧಪೂಜಾ
09-10-2022 ಬುಧ ಆಗ್ರಹಾಯಣೀ ನವಾನ್ನಪ್ರಾಶನ (ಹೊಸತು)
18-10-2022 ಮಂಗಳ ತುಲಾ ಸಂಕ್ರಾಂತಿ, ಗಣಹೋಮ, ಉತ್ಸವಬಲಿ
23-10-2022 ರವಿ ರಾತ್ರೌ ಜಲಪೂರಣಂ, ಚಂದ್ರೋದಯೇ ಅಭ್ಯಂಗಃ
24-10-2022 ಸೋಮ ನರಕಚತುರ್ದಶಿ ಸಂಜೆ ದೀಪಾವಳೀ ಬಲೀಂದ್ರಪೂಜೆ, ಲಕ್ಷ್ಮೀಪೂಜೆ
25-10-2022 ಮಂಗಳ ಗೋಪೂಜೆ, ವಾಹನಪೂಜೆ, ಅಮವಾಸ್ಯೆ
25-10-2022 ಮಂಗಳ ಖಂಡಗ್ರಾಸ ಸೂರ್ಯಗ್ರಹಣ -(ಸ್ಪರ್ಶ ಸಂಜೆ 05:06, ಅಂತ್ಯ : ಸಂಜೆ 6:27)
26-10-2022 ಬುಧ ಶ್ರೀ ತುಲಸೀ ಪೂಜಾರಂಭ