ವಿಶ್ವರೂಪ ದರ್ಶನ 23-11-2019
ಶನಿವಾರದ ಬೆಳಿಗ್ಗೆ 5-00ಕ್ಕೆ ಶ್ರೀದೇವಳದ ವಾತವರಣವು ದೇವಲೋಕವನ್ನೆ ಮೀರಿಸುವಂತಿತ್ತು ಎತ್ತ ನೋಡಿದರೂ ಹಣತಿಗೆ ದೀಪಗಳ ಮೆರಗು ದೀಪ ಬೆಳಗಲು ಭಕ್ತಾದಿಗಳ ಓಡಾಟ ಮಂಗಳಾರತಿಯ ದಿವ್ಯ ಪ್ರಭೆಯಲ್ಲಿ ಶ್ರೀಗುರುನರಸಿಂಹ ದೇವರ ಮೂಲ ಬಿಂಬದ ದರ್ಶನ
ವಿದ್ಯುತ್ ದೀಪದ ಬೆಳಕಿಲ್ಲದೇ ಹಣತಿಗೆ ಬೆಳಗಿನ ಪ್ರಭೆಯಲ್ಲಿ ಸುಮಾರು 5ಸಾವಿರಕ್ಕೂ ಮಿಕ್ಕಿ ಶ್ರೀದೇವರ ದರ್ಶನ ಮಾಡಿ ಕೃತಾರ್ಥರಾದರು
ನಂತರ ಎಲ್ಲರಿಗೂ ಪಾನಕ ಪನಿವಾರ ವಿತರಣೆಯನ್ನು ಮಾಡಲಾಯಿತು
 
                                                                                               










