ಶ್ರೀದೇವಳದ ಮುಖ್ಯ ದ್ವಾರದಲ್ಲಿ ಮುಖಮಂಟಪವನ್ನು ರಚಿಸಲು ಆಡಳಿತ ಮಂಡಳಿಯು ನಿರ್ಣಯಿಸಿದ್ದು ಇದೀಗ ಕಾಮಗಾರಿ ಪ್ರಾರಂಭವಾಗಿದೆ. ಸುಮಾರು 2.5 ಲಕ್ಷದ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಲಾತ್ಮಕ ಮಂಟಪದೊಂದಿಗೆ ಶ್ರೀಗುರುನರಸಿಂಹ, ಶ್ರೀಗಣಪತಿ, ಶ್ರೀ ಲಕ್ಷ್ಮೀ ಮತ್ತು ಜಯ ವಿಜಯ ಮೂರ್ತಿಗಳೊಂದಿಗೆ ಕಂಗೋಳಿಸಲು ಸಜ್ಜಾಗುತ್ತಿದೆ. ಭಕ್ತಾದಿಗಳು ಈ ಸೇವಾ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸುವ ಅವಕಾಶವಿದ್ದು ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಲು ಕೋರಿದೆ.

![20151111_161654[1]](https://i0.wp.com/srigurunarasimhatemple.com/wp-content/uploads/2015/11/20151111_1616541-e1447239130664-225x300.jpg?resize=225%2C300)
![20151111_161751[1]](https://i0.wp.com/srigurunarasimhatemple.com/wp-content/uploads/2015/11/20151111_1617511.jpg?resize=300%2C225)