ವಸಂತವೇದ ಶಿಬಿರ ಸಮಾರೋಪ
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದಲ್ಲಿ ಏಪ್ರೀಲ್ 10ರಿಂದ ನಡೆದ ವಸಂತ ವೇದ ಶಿಬಿರವು ಮೇ 1ರಂದು ಸಮಾರೋಪಗೊಂಡಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ ಅನಂತಪದ್ಮನಾಭ ಐತಾಳರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು ಇವರೊಂದಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಜಿ. ಮಂಜುನಾಥ ಮಯ್ಯ, ಕೋಶಾಧಿಕಾರಿ ಶ್ರೀ ಪ್ರಸನ್ನ ತುಂಗ, ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ. ಮಂಜುನಾಥ ಉಪಾಧ್ಯಾಯ, ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಕೆ. ಶ್ರೀಪತಿ ಅಧಿಕಾರಿ, ಕೂಟ ಸಮಾಜದ ಹಿರಿಯ ಸದಸ್ಯರಾದ ಶ್ರೀ ಜಿ.ರಾಮಕೃಷ್ಣ ಐತಾಳರು, ಶಿಬಿರದ ನಿರ್ದೆಶಕರಾದ ವೇ.ಮೂ. ವೆಂಕಟರಮಣ ನಾವಡ, ಮತ್ತು ಪ್ರಾಂಶುಪಾಲರಾದ ಶ್ರೀ ಯು ಉಮೇಶ ಹೊಳ್ಳ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ 22 ದಿನ ಪೂರೈಸಿದ ಶಿಬಿರದ ವಿದ್ಯಾಥರ್ಿಗಳೊಡನೆ ಅವರ ಮನೆಯವರು ಭಾಗವಹಿಸಿದ್ದು ಸ್ವಾಗತವನ್ನು ಶ್ರೀ ಜಿ. ಮಂಜುನಾಥ ಮಯ್ಯರು ಮಾಡಿದರು ವೇದಾಧ್ಯಯನ ಮಹತ್ವ ಮತ್ತು ಸಂಸ್ಕಾರದ ಅರಿವು ಹಾಗೂ ಶಿಬಿರದ ಉದ್ದೇಶದ ಕುರಿತು ಅಧ್ಯಾಪಕರಾದ ಶ್ರೀ ನಾರಾಯಣ ಭಟ್, ಶ್ರೀ ಮಧುಸೂಧನ, ಉಮೇಶ ಹೊಳ್ಳರು, ಶ್ರೀ. ಪಿ.ಮಂಜುನಾಥ ಉಪಾಧ್ಯಾಯ, ಶ್ರೀ ಕೆ. ಅನಂತಪದ್ಮನಾಭ ಐತಾಳರು ತಿಳಿಸಿದರು ಶ್ರೀ ಪ್ರಸನ್ನ ತುಂಗರು ಧನ್ಯವಾದ ಸಮರ್ಪಣೆ ಮಾಡಿದರು ಕಾರ್ಯಕ್ರಮವನ್ನು ವ್ಯವಸ್ಥಾಪಕರಾದ ಎಚ್. ನಾಗರಾಜ ಹಂದೆ ನಿರೂಪಿಸಿದರು
ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾ ಅಧ್ಯಯನದ ಸರ್ಟಿಪಿಕೇಟ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು. ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲಾ ಗುರುಗಳಿಗೆ ಹಾಗೂ ಜ್ಯೋತಿಷ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಮತ್ತು ಶಿಬಿರದ ಪ್ರಾಂಶುಪಾಲರಾದ ಉಪ್ಪುಂದ ಶ್ರೀ ಉಮೇಶ ಹೊಳ್ಳ ಇವರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಶಿಬಿರದ ಯಶಸ್ವಿಗೆ ವಸ್ತು ರೂಪದ ಮತ್ತು ನಗದು ದೇಣಿಗೆ ನೀಡಿ ಸಹಕರಿಸಿದ ಎಲ್ಲರನ್ನು ಸ್ಮರಿಸಲಾಯಿತು ಮತ್ತು ಶಿಬಿರದಲ್ಲಿ ಸ್ವಯಂಸೇವಕರಾಗಿ ಶ್ರಮಿಸಿದವರನ್ನು ಈ ಸಂಧರ್ಭದಲ್ಲಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.