ಆಂಜನೇಯ ಜಯಂತಿ ಆಚರಣೆ
ಆಂಜನೇಯ ಜಯಂತಿಯ ಪ್ರಯುಕ್ತ ಸಾಲಿಗ್ರಾಮ ಶ್ರೀಆಂಜನೇಯ ದೇವಳದಲ್ಲಿ ಏಪ್ರೀಲ್ 19ರ ಚಿತ್ರಪೂಣರ್ಿಮೆಯ ಬೆಳಿಗ್ಗೆ 5-00 ರಿಂದ ಶ್ರೀಆಂಜನೇಯ ದೇವರಿಗೆ ಮಹಾಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಪಂಚವಿಂಶತಿ ಕಲಶಾಭಿಷೇಕ, ಹೋಮ, ಸಂಹಿತಾ ಪಾರಾಯಣ, ಸುಂದರಕಾಂಡ ಪಾರಾಯಣ, ಪವಮಾನ ಪಾರಾಯಣ ನಂತರ ಮಹಾಮಂಗಳಾರತಿ ನೇರವೇರಿಸಲಾಯಿತು ನಂತರ ನೆರೆದಿದ್ದ ಭಕ್ತರಿಗೆ ಪನೀವಾರ ಪ್ರಸಾದವನ್ನು ಹಂಚಲಾಯಿತು. ಸಂಜೆ 6-00ರಿಂದ ಮಹಾರಂಗಪೂಜೆಯನ್ನು ನೆರವೇರಿಸಿ ಪನೀವಾರ ಪ್ರಸಾದನ್ನು ಹಂಚಲಾಯಿತು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ ಅನಂತಪದ್ಮನಾಭ ಐತಾಳ, ಕೋಶಾಧಿಕಾರಿ ಪ್ರಸನ್ನ ತುಂಗ, ಸದಸ್ಯರಾದ ವೇ.ಮೂ. ಚಂದ್ರಶೇಖರ ಉಪಾಧ್ಯಾಯ ಮತ್ತು ಕೂಟಮಹಾಜಗತ್ತಿನ ಪದಾಧಿಕಾರಿಗಳು, ಸದಸ್ಯರು, ಗ್ರಾಮಮೋಕ್ತೇಸರರು, ಗಣ್ಯರು, ಪೇಟೆಯವರು ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀದೇವರ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.