ನರಸಿಂಹ ಜಯಂತಿ
ಶ್ರೀದೇವಳದಲ್ಲಿ ದಿನಾಂಕ 17-05-2019ರ ಶುಕ್ರವಾರ ನರಸಿಂಹ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪೂರ್ವಾಹ್ನ
9-00 ರಿಂದ ನರಸಿಂಹಹೋಮ, ಸಂಹಿತಾಭಿಷೇಕ, ಪಂಚವಿಂಶತಿ ಕಲಶಾಭಿಷೇಕದೊಂದಿಗೆ ಶ್ರೀದೇವರ ಉತ್ಸವಮೂರ್ತಿಗೆ ಚಿನ್ನದ ಅಟ್ಟೆಕುಪ್ಪಸವನ್ನು ಶ್ರೀದೇವರಿಗೆ ಸಮರ್ಪಿಸಲಾಯಿತು. ಮಹಾಪೂಜೆಯ ನಂತರ ಭೋಜನ ಪ್ರಸಾದ ವಿತರಿಸಲಾಯಿತು.
ಕೂಟಮಹಾಜಗತ್ತು ಸಾಲಿಗ್ರಾಮ ಮಹಿಳಾವೇದಿಕೆ. ಸಾಲಿಗ್ರಾಮ ಅಂಗಸಂಸ್ಥೆ ಮತ್ತು ಕೇಂದ್ರ ಸಂಸ್ಥೆಯವರ ಸಹಸ್ರ ಕಂಠ ಗಾಯನ ಸಮರ್ಪಣೆ ಕಾರ್ಯಕ್ರಮವು ಅಭೂತಪೂರ್ವವಾಗಿ ಯಶಸ್ಸನ್ನು ಕಂಡಿತಲ್ಲದೆ ಸಹಸ್ರಕ್ಕೂ ಮಿಕ್ಕಿ ಭಕ್ತರು ಈ ಭಕ್ತಿಗಾನದಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು.
ಸಂಜೆ 5-30 ರಿಂದ ಶ್ರೀದೇವರಿಗೆ ಮಹಾಪಂಚಾಮೃತಾಭಿಷೇಕ, ಮಹಾಪೂಜೆ ಓಲಗಮಂಟಪದಲ್ಲಿ ಅಷ್ಟಾವಧಾನ ಸೇವೆ, ಒಳ ಪ್ರಾಂಗಾಣದಲ್ಲಿ ರಜತ ರಥೋತ್ಸವ ನೆರವೇರಿಸಿ ನೆರೆದಿದ್ದ ಭಕ್ತರಿಗೆ ಪನೀವಾರ ಪ್ರಸಾದ ವಿತರಿಸಲಾಯಿತು. ಸಂಜೆ 8-30ರಿಂದ ಹಿರೇರಂಗಪೂಜೆ ಉತ್ಸವಬಲಿ, ಪುಷ್ಫರಥೋತ್ಸವನ್ನು ಶ್ರೀಆಂಜನೇಯ ದೇವಳದವರೆಗೆ ನೆರವೇರಿಸಲಾಯಿತು.
ಶ್ರೀಗುರುನರಸಿಂಹ ಬಯಲುರಂಗಮಂದಿರದಲ್ಲಿ ಸಂಜೆ 7-30ರಿಂದ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಸೇವಾರೂಪದಲ್ಲಿ ಯಕ್ಷಗಾನ ಪ್ರಸಂಗ :- ಧಮರ್ಾಂಗದ ದ್ವಿಗ್ವಿಜಯ (ಕಾಲಮಿತಿ) ಯಶಸ್ವಿ ಪ್ರದರ್ಶನದೊಂದಿಗೆ ಜನಮನ ಸೂರೆಗೊಂಡಿತು.
ಧಾರ್ಮಿಕ ಕಾರ್ಯಕ್ರಮಗಳು ಶ್ರೀದೇವಳದ ತಂತ್ರಿಗಳಾದ ವೇ.ಮೂ.ಕೃಷ್ಣ ಸೋಮಯಾಜಿ, ಅರ್ಚಕರಾದ ವೇ.ಮೂ.ಚಂದ್ರಶೇಖರ ಅಡಿಗರು ಮತ್ತು ವೇ.ಮೂ. ಶ್ರೀನಿವಾಸ ಅಡಿಗರ ಪೌರಹಿತ್ಯದಲ್ಲಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ. ಅನಂತಪದ್ಮನಾಭ ಐತಾಳ, ಕಾರ್ಯದರ್ಶಿ ಶ್ರೀ ಜಿ. ಮಂಜುನಾಥ ಮಯ್ಯ, ಕೋಶಾದಿಕಾರಿ ಶ್ರೀ ಪ್ರಸನ್ನ ತುಂಗ, ಸದಸ್ಯರಾದ ವೇ.ಮೂ. ಚಂದ್ರಶೇಖರ ಉಪಾಧ್ಯ, ಮಾರ್ಗದರ್ಶನದಲ್ಲಿ ಕೂ.ಮಜ. ಸಾಲಿಗ್ರಾಮ ಕೇಂದ್ರ ಸಂಸ್ಥೆ ಮತ್ತು ಎಲ್ಲಾ ಅಂಗಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಮೊಕ್ತೆಸರರು, ಗಣ್ಯ ವ್ಯಕ್ತಿಗಳು, ಊರಿನ ಹತ್ತು ಸಮಸ್ತರ ಮತ್ತು ಭಕ್ತಾದಿಗಳ ಉಪಸ್ಥಿತಿಯೊಂದಿಗೆ ಯಶಸ್ವಿಯಾಗಿ ಜರುಗಿತು.
ಈ ಸಲ ಕಳೆದ ವರ್ಷಕ್ಕಿಂತಲೂ ಅತಿ ಹೆಚ್ಚು ಭಕ್ತಾದಿಗಳು ಶ್ರೀದೇವಳಕ್ಕೆ ಬೆಳಗ್ಗಿನಿಂದ ತಡ ರಾತ್ರಿಯವರೆಗೂ ಭೇಟಿ ನೀಡಿ ಶ್ರೀದೇವರ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು. ಭಕ್ತಾದಿಗಳಲ್ಲಿ ನರಸಿಂಹ ಜಯಂತಿಯ ಆಚರಣೆಯು ಖುಷಿ ಕೊಟ್ಟಿತ್ತಲ್ಲದೆ ಸಾಲಿಗ್ರಾಮ ಹಬ್ಬವನ್ನು ಪುನಃ ನೆನಪಿಸುವಂತೆ ಮಾಡಿದ್ದು ಶ್ರೀಗುರುನರಸಿಂಹ ದೇವರ ಪ್ರಸನ್ನತೆಗೆ ಸಾಕ್ಷಿಯಾಗಿತ್ತು