ಸಾಲಿಗ್ರಾಮದ ದೇವಳದಲ್ಲಿ ಚೌತಿ ಸಂಪನ್ನ
ಗಣೇಶ ಚತುರ್ಥಿ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಳ ಹಿಂದಿನ ಕಾಲದಿಂದಲೂ ವಿಶಿಷ್ಠವಾಗಿ ಆಚರಿಸಿಕೊಂಡು ಬರುತ್ತಿದ್ದು ಆ ಸಂಪ್ರದಾಯದಂತೆ ಆಯಾಯ ಧಾರ್ಮಿಕ ಕಾರ್ಯಕ್ರಮಗಳ ಸಂಬಂಧಿತ ಉಪಾಧಿವಂತರ ಸಹಕಾರದಲ್ಲಿ ಶ್ರೀದೇವಳದ ತಂತ್ರಿಗಳಾದ ವೇ.ಮೂ ಕೃಷ್ಣ ಸೋಮಯಾಜಿಯವರ ಪ್ರಧಾನತ್ವದಲ್ಲಿ 120ಕಾಯಿ ಗಣಹೋಮ, ವೇ.ಮೂ.ಶ್ರೀನಿವಾಸ ಅಡಿಗ ಮತ್ತು ಉಪಾಧಿವಂತರ ಸಹಕಾರದಲ್ಲಿ ವೇ.ಮೂ.ಮಂಜುನಾಥ ಉಪಾಧ್ಯರ ಪ್ರಧಾನತ್ವದಲ್ಲಿ ನರಸಿಂಹ ಹೋಮ ಮತ್ತು ಸಂಹಿತಾ ಪಾರಾಯಣವನ್ನು ಮಾಡಲಾಯಿತು. ಸರತಿ ಅರ್ಚಕರಾದ ವೇ.ಮೂ. ಜನಾರ್ದನ ಅಡಿಗರ ಪೌರಹಿತ್ಯದಲ್ಲಿ ಶ್ರೀಗುರುನರಸಿಂಹ ದೇವರಿಗೆ ಮೂಡುಗಣಪತಿ ಸೇವೆ, ಶ್ರೀ ಗಣಪತಿ ದೇವರಿಗೆ ಪಂಚಭಕ್ಷಪರಮಾನ್ನ ನೈವೇಧ್ಯ ವಿಶೇಷ ಪೂಜೆಯನ್ನು ಮಾಡಿದರು, ಇದರೊಂದಿಗೆ ಸಂಜೆ 7-00ಕ್ಕೆ ಶ್ರೀಮಹಾಗಣಪತಿ ದೇವರಿಗೆ ಮಹಾರಂಗಪೂಜೆ, ಶ್ರೀಗುರುನರಸಿಂಹ ದೇವರಿಗೆ ಕಿರಿರಂಗಪೂಜೆ, ಉತ್ಸವಬಲಿ ಮತ್ತು ರಥೋತ್ಸವವನ್ನು ಮಾಡುವುದರೊಂದಿಗೆ ಚೌತಿಯ ಧಾರ್ಮಿಕ ಕಾರ್ಯಕ್ರಮಗಳನ್ನುಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು. ಶ್ರೀದೇವಳದ ಅಧ್ಯಕ್ಷರಾದ ಶ್ರೀ ಕೆ.ಎ. ಅನಂತಪದ್ಮನಾಭ ಐತಾಳರು ಉಪಸ್ಥಿತರಿದ್ದು ಶ್ರೀದೇವರ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.