ಸಾಲಿಗ್ರಾಮದಲ್ಲಿ ರಾಜಗೋಪುರ ನಿರ್ಮಾಣ
ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಳದ ಎದುರಿಗೆ ನೂತನವಾಗಿ ರಾಜಗೋಪುರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಅಂದಾಜು 50ಅಡಿ ಎತ್ತರ, 27ಅಡಿ ಅಗಲ ಹೊಂದಿರುವ ಈ ರಾಜಗೋಪುರದಲ್ಲಿ 5 ಅಂತಸ್ತುಗಳು ಇದ್ದು ಇದರಲ್ಲಿ ವಿಗ್ರಹಗಳ ಜೋಡಣೆಯೊಂದಿಗೆ ಕಲಾತ್ಮಕ ಕುಸುರಿ ಕೆಲಸಗಳು ಒಳಗೊಂಡಿವೆ. ಸಿಮೆಂಟ್ ಮತ್ತು ಇಟ್ಟಿಗೆಗಳಿಂದ ನಿರ್ಮಾಣವಾಗುತ್ತಿರುವ ಗೋಪುರದ ರಚನಾ ಕಾರ್ಯವನ್ನು ತಮಿಳುನಾಡು ಮೂಲದ ಶಿಲ್ಪಿ ಪ್ರಭಾಕರನ್ ಅವರು ನಿರ್ವಹಿಸುತ್ತಿದ್ದಾರೆ. ನಿರ್ಮಾಣ ಕಾರ್ಯಕ್ಕೆ ಅಂದಾಜು 90ಲಕ್ಷ ವೆಚ್ಚ ತಗುಲಲಿದ್ದು, ಭಕ್ತಾದಿಗಳು ಸಹಕಾರದಿಂದ ಈಗಾಗಲೇ 60ಲಕ್ಷಕ್ಕೂ ಮಿಕ್ಕಿ ದೇಣಿಗೆ ಬಂದಿರುತ್ತದೆ. ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿರುವ ಪ್ರತಿಯೊಬ್ಬ ಭಕ್ತಾದಿಗಳಿಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಇಂಟರ್ ಲಾಕ್ ಅಳವಡಿಕೆ
ಶ್ರೀದೇವಳದ ಬಯಲು ರಂಗಮಂದಿರದ ಎದುರು ಮತ್ತು ವಾಹನ ನಿಲುಗಡೆ ಸ್ಥಳದಲ್ಲಿ ಅಂದಾಜು ರೂ.ಎಂಟು ಲಕ್ಷ ವೆಚ್ಚದಲ್ಲಿ (ಅಂದಾಜು 16ಸಾವಿರ ಚದರಡಿ) ಇಂಟರ್ಲಾಕ್ ನ್ನು ಓರ್ವ ದಾನಿಗಳ ಕೊಡುಗೆಯೊಂದಿಗೆ ಅಳವಡಿಸಲಾಗುತ್ತಿದೆ.