ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ
ಶ್ರೀದೇವಳದ ವಿಶಿಷ್ಠ ಆಚರಣೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತು ಶ್ರೀವಿಟ್ಲಪಿಂಡಿ ಉತ್ಸವವು ಅತಿ ಪ್ರಾಮುಖ್ಯವಾಗಿದೆ.
ಶ್ರೀ ಕೃಷ್ಣಜನ್ಮಾಷ್ಠಮಿಯ ದಿನ ಮಾತ್ರ ಬಾಲಗೋಪಾಲ ಮೂರ್ತಿಗೆ ವಿಶೇಷಪೂಜೆಯನ್ನು ಸಲ್ಲಿಸಲಾಗುತ್ತದೆ. ಹಾಗೂ
ಶ್ರೀದೇವರ ಉತ್ಸವವು ದಕ್ಷಿಣಾಯಣದಲ್ಲಿ ಶ್ರೀದೇವರ ವಠಾರ ಬಿಟ್ಟು ದಕ್ಷಿಣ ಮಾರ್ಗವಾಗಿ ಈ ಒಂದು ದಿನ ಮಾತ್ರ ಎಡಬೆಟ್ಟು ಶ್ರೀಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿಬರುತ್ತದೆ.
(ಉಳಿದಂತೆ ಜನವರಿಯಲ್ಲಿ ನಡೆಯುವ ಸಾಲಿಗ್ರಾಮ ಹಬ್ಬದಲ್ಲಿ ಮಾತ್ರ ಉತ್ತರಮಾರ್ಗವಾಗಿ ಕೋಟ ಶ್ರೀಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನಕ್ಕೆ ಅವಭೃತ ಸ್ನಾನಕ್ಕೆ ಮಾತ್ರ ಹೋಗಿಬರಲಾಗುತ್ತಿದೆ)
ಮತ್ತು ಶ್ರೀದೇವಳದಲ್ಲಿ ಮಂಗಳವಾರ ಮತ್ತು ಶುಕ್ರವಾರಗಳಂದು ವಿಟ್ಲಪಿಂಡಿ ಉತ್ಸವ ಮಾಡುವುದಿಲ್ಲ ಕಾರಣ ಮೊಸರು ಕುಡಿಕೆ ಮಂಗಳಕರವಾದ ಈ ದಿನ ಒಡೆಯುವ ಸಂಪ್ರದಾಯ ಶ್ರೀದೇವಳದಲ್ಲಿ ಇಲ್ಲದೇ ಇರುವ ಕಾರಣ ಈ ಬಾರಿ ಉತ್ಸವವನ್ನು ಶನಿವಾರದಂದು ನಡೆಸಲಾಗುತ್ತಿದೆ.
ಕೃಷ್ಣಜನ್ಮಾಷ್ಠಮಿ :- 10-09-2020 ರಾತ್ರಿ 7-30 ರಿಂದ
ಶ್ರೀದೇವಳದ ತೀರ್ಥಮಂಟಪದಲ್ಲಿ ಬಾಲಗೋಪಾಲಕೃಷ್ಣನಿಗೆ ಪಂಚಾಮೃತಾಭಿಷೇಕ, ವಿಷ್ಣುಸಹಸ್ರನಾಮ ಅರ್ಚನೆ, ಪಂಚಭಕ್ಷಪರಮಾನ್ನ ನೈವೇಧ್ಯ, ಮಹಾಮಂಗಳಾರತಿ, ಅರ್ಘ್ಯಪ್ರದಾನ
ಶ್ರೀಗುರುನರಸಿಂಹದೇವರಿಗೆ ಅಭಿಷೇಕ, ಪಂಚಭಕ್ಷಪರಮಾನ್ನ ನೈವೇಧ್ಯ, ಮಹಾಮಂಗಳಾರತಿ ಸೇವೆ ನಡೆಯಿತು .
ವಿಟ್ಲಪಿಂಡಿ ಉತ್ಸವ ಮೆರವಣಿಗೆ : 12-09-2020 ಶನಿವಾರ ಸಂಜೆ 4-30ಕ್ಕೆ
ಸಂಜೆ ಶ್ರೀಗುರುನರಸಿಂಹ ದೇವರಿಗೆ ಮಹಾಪೂಜೆ ನಂತರ ರಜತಪಲ್ಲಕ್ಕಿಯಲ್ಲಿ ಉತ್ಸವ ಮೆರವಣಿಗೆ ಶ್ರೀದೇವಳದಿಂದ ಹೊರಟು ಶ್ರೀಆಂಜನೇಯ ದೇವಳ ಮಾರ್ಗವಾಗಿ ಎನ್ಎಚ್ 66 ನಲ್ಲಿ ಪಯಣಿಸುತ್ತಾ ಮಾರ್ಗ ಮಧ್ಯದಲ್ಲಿ ಮೊಸರು ಕುಡಿಕೆ ಒಡೆಯುತ್ತಾ ಚೇಂಪಿಯವರೆಗೆ ಪಯಣ ನಂತರ ಎಡಬೆಟ್ಟು ಗ್ರಾಮಸ್ಥರ ಬೇಡಿಕೆಯಂತೆ ಶ್ರೀಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ಕಟ್ಟೆಪೂಜೆ ಉತ್ಸವ ನಡೆಯುತ್ತದೆ, ಎಡಬೆಟ್ಟು ಗ್ರಾಮಸ್ಥರಿಂದ ವಿವಿಧ ಸೇವೆಗಳೊಂದಿಗೆ, ಮಹಾಮಂಗಳಾರತಿ, ಅಷ್ಟವಧಾನ ಸೇವೆಗಳು ನಡೆಯಲ್ಪಡುತ್ತದೆ. ನಂತರ ಶ್ರೀಗೋಪಾಲಕೃಷ್ಣ ದೇವರಿಗೆ ಮಹಾಮಂಗಳಾರತಿಯ ಸೇವೆಯ ನಂತರ ಪಾನಕ ಪನೀವಾರ ಪ್ರಸಾದ ಅಲ್ಲಿಯ ದೇವಳದ ವತಿಯಿಂದ ವಿತರಣೆ. ನಂತರ ಉತ್ಸವ ಮರಳಿ ಹೊರಟು ಮಾರ್ಗ ಮಧ್ಯದಲ್ಲಿ ಮೊಸರು ಕುಡಿಕೆ ಒಡೆಯುತ್ತಾ, ಭಕ್ತಾದಿಗಳಿಂದ ಆರತಿ ಮುಂತಾದ ಸೇವೆಗಳನ್ನು ಸ್ವೀಕರಿಸುತ್ತಾ ಶ್ರೀಆಂಜನೇಯ ದೇವಳಕ್ಕೆ ಆಗಮನ ಇಲ್ಲಿ ಸೋಣೆ ಆರತಿ ಸೇವೆ, ಅಷ್ಟವಧಾನ ಸೇವೆ ಪೂರೈಸಿಕೊಂಡು ಶ್ರೀದೇವಳಕ್ಕೆ ಹಿಂತರುಗಲಾಯಿತು