ದೀಪಾವಳಿ ಹಬ್ಬ ಆಚರಣೆ :- ದಿನಾಂಕ 10-11-2015 ರಂದು ಶ್ರೀಗುರುನರಸಿಂಹ ಮತ್ತು ಪರಿವಾರದೇವರುಗಳಿಗೆ ಅಭ್ಯಂಜನ ಅಭಿಷೇಕ, ದಿನಾಂಕ 11-11-2015ರ ಸಂಜೆ 7-00 ಕ್ಕೆ ಮಹಾಪೂಜೆ, ಉತ್ಸವಬಲಿ, ಬಲೀಂದ್ರ ಪೂಜೆ ನಡೆಯಿತು
ಗೋಪೂಜೆ :- ದಿನಾಂಕ 12-11-2015ರ ಪೂರ್ವಾಹ್ನ 9-30 ಕ್ಕೆ ಇದೇ ಮೊದಲಬಾರಿಗೆ ಗೋಪೂಜೆಯನ್ನು ಮಾಡಿ ಗೋಮಾತೆಗೆ ವಂದಿಸಲಾಯಿತು. ಈ ಎಲ್ಲಾ ವಿಶೇಷ ಪೂಜೆಗಳನ್ನು ಶ್ರೀದೇವಳದ ಅರ್ಚಕರಾದ ವೇ.ಮೂ. ವಿಜಯಕುಮಾರ ಅಡಿಗರು ಮಾಡಿದರು
ವಾಹನ ಪೂಜೆ :- ಶ್ರೀದೇವಳದಲ್ಲಿ ವಾಹನ ಪೂಜೆ ವಿಶೇಷವಾಗಿದ್ದು ಭಕ್ತಾದಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ವಾಹನ ಪೂಜೆಯನ್ನು ಇಲ್ಲಿ ಮಾಡಿಸಿಕೊಳ್ಳುತ್ತಾರೆ ಈ ವರ್ಷದ ದೀಪಾವಳಿಯ ಸಂಧರ್ಭದಲ್ಲಿ ಸುಮಾರು 500ಕ್ಕೂ ಮಿಕ್ಕಿ ವಾಹನಪೂಜೆ ನೇರವೇರಿತು.