ಇಂಡಿಯನ್ ಆಯಿಲ್ ಕಾರ್ಪೋರೇಷನ್ ಬೆಂಗಳೂರು ಟರ್ಮಿನಲ್ ಜನರಲ್ ಮೆನೇಜರ್ ಆಗಿರುವ ಶ್ರೀವರದ ಆಚಾರ್ಯ ಇವರು ದಿನಾಂಕ 21-11-2015 ರ ಶನಿವಾರದಂದು ಸಕುಟುಂಬಸಮೇತರಾಗಿ ಶ್ರೀದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇವರನ್ನು ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ. ಅನಂತಪದ್ಮನಾಭ ಐತಾಳರು ಮತ್ತು ಸದಸ್ಯರಾಗಿರುವ ಶ್ರೀ ಪ್ರಸನ್ನ ತುಂಗರು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.