ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದಲ್ಲಿ ಶಾಕಲ ಋಕ್ ಸಂಹಿತಾಯಾಗ ಸಂಪನ್ನ
ಲೋಕಕಲ್ಯಾಣಾರ್ಥವಾಗಿ ಋತ್ವಿಜರು ಸೇರಿಕೊಂಡು ಸೇವಾರೂಪದಲ್ಲಿ ಶಾಕಲ ಋಕ್ ಸಂಹಿತಾ ಯಾಗವನ್ನು ದಿನಾಂಕ 29-11-2015 ರಿಂದ ಪ್ರಾರಂಭಿಸಿ ದಿನಾಂಕ 06-12-2015 ರಂದು ಸಂಪನ್ನಗೊಳಿಸಿದರು.
ಶ್ರೀದೇವಳದ ತಂತ್ರಿಗಳಾದ ವೇ.ಮೂ. ಯಜ್ಞನಾರಾಯಣ ಸೋಮಯಾಜಿಯವರ ಆರ್ಶೀವಾದದೊಂದಿಗೆ, ವೇ.ಮೂ.ಮಂಜುನಾಥ ಉಪಾಧ್ಯರ ಸಾರಥ್ಯದಲ್ಲಿ ವೇ.ಮೂ.ಹಂದಟ್ಟು ಸದಾಶಿವ ಐತಾಳರ ಪ್ರಧಾನತ್ವದಲ್ಲಿ ವೇ.ಮೂ. ಕ್ರಷ್ಣ ಸೋಮಯಾಜಿ, ವೇ.ಮೂ.ಹರಿಕ್ರಷ್ಣ ಉಪಾಧ್ಯಾಯ, ವೇ.ಮೂ. ಚಿದಾನಂದ ಐತಾಳ, ವೇ.ಮೂ.ಗುರುರಾಜ ಭಟ್, ವೇ.ಮೂ.ವೆಂಕಟರಮಣ ನಾವಡ, ವೇ.ಮೂ.ಯಜ್ಞೇಶ್ವರ ಐತಾಳ.ವೇ.ಮೂ.ಗೋಪಾಲ ಸೋಮಯಾಜಿ, ಶ್ರೀ ಅಕ್ಷಯ ಹಂದೆ, ಶ್ರೀಕ್ರಷ್ಣ ಶರ್ಮ, ಅರ್ಚಕರಾದ ವೇ.ಮೂ.ವಿಜಯಕುಮಾರ ಅಡಿಗ ಮತ್ತು ಹಲವಾರು ಋತ್ವಿಜರ, ದಾನಿಗಳ, ಭಕ್ತಾದಿಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರದೊಂದಿಗೆ ಯಾಗವು ಸಂಪೂರ್ಣವಾಗಿ ಯಶಸ್ಸು ಕಂಡಿತು,
ಶ್ರೀದೇವರಿಗೆ ಪ್ರತಿ ದಿನ ಸಂಹಿತಾಕಲಶಾಭಿಷೇಕದೊಂದಿಗೆ ಸಾಲಿಗ್ರಾಮ ಮಹಿಳಾವೇದಿಕೆಯ 100 ಕ್ಕೂ ಮಿಕ್ಕಿ ಸದಸ್ಯೆಯರಿಂದ ವಿಷ್ಣುಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮಗಳ ಪಠಣವು ವಿಶೇಷವಾಗಿತ್ತು. ಪ್ರತಿ ದಿನವು ವಿಷೇಷ ಭೋಜನಪ್ರಸಾದ ವಿತರಣೆ ನಡೆಯುತ್ತಿದ್ದು, ಎಲ್ಲಾ ದಿನ ಸೇರಿ 6500ಕ್ಕೂ ಮಿಕ್ಕಿ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿದರು, ಪ್ರತಿ ದಿನವು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ಸಾಲಿಗ್ರಾಮದಲ್ಲಿ ಹಬ್ಬದ ವಾತವಾರಣವನ್ನು ನೆನಪಿಸುವಂತಿತ್ತು.
ಶ್ರೀದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆನ್ನುವ ನಮ್ಮ ಸಂಕಲ್ಪವನ್ನು ನಮ್ಮ ಋತ್ವಿಜರು ಸೇವಾರೂಪದಲ್ಲಿ ಮಾಡಿ ಸಾಕಾರಗೊಳಿಸಿದ್ದಾರೆ, ಈ ಯಾಗದ ಯಶಸ್ಸಿಗೆ ದುಡಿದ ಮತ್ತು ಸಹಕರಿಸಿದ ಎಲ್ಲಾ ಋತ್ವಿಜರಿಗೆ, ದಾನಿಗಳಿಗೆ, ಭಕ್ತಾದಿಗಳಿಗೆ ಸಿಬ್ಬಂದಿವರ್ಗದವರಿಗೆ ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಅಂಗಸಂಸ್ಥೆಗಳಿಗೆ, ಮತ್ತು ಗ್ರಾಮಮೋಕ್ತೇಸರರಿಗೆ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತಾ, ಶ್ರೀಗುರುನರಸಿಂಹ ದೇವರು ಸರ್ವರಿಗೂ ಸನ್ಮಂಗಲ ಉಂಟುಮಾಡಲಿ ಎಂದು ಆ ಸರ್ವಶಕ್ತನನ್ನೆ ಮನಸಾರೆ ಪ್ರಾರ್ಥಿಸುತ್ತೇವೆ. ಹೀಗೆ ಸಹಕಾರ ನೀಡಿ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳು ಶ್ರೀದೇವಳದಲ್ಲಿ ಜರುಗುವಂತಾಗಲಿ ಎಂದು ಶ್ರೀದೇವಳದ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರು ನೆರೆದಿದ್ದ ಭಕ್ತಾದಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ, ಇಂತಹ ಬ್ರಹತ್ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸಿ ಪ್ರೋತ್ಸಾಹಿಸಿದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.