ಶ್ರೀಗುರುನರಸಿಂಹ ದೇವಳದ ಸಾಂಪ್ರಾದಾಯಿಕ ದೀಪೋತ್ಸವವು ಕಾರ್ತಿಕ ಅಮವಾಸ್ಯೆಯಂದು ಸಂಪನ್ನಗೊಂಡಿತು. ಬೆಳಗ್ಗೆ ನರಸಿಂಹ ಹೋಮ, ನವಕಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಭೋಜನ ಪ್ಸಂರಸಾದ ವಿತರಣೆ ನಡೆಯಿತು. ಸಂಜೆ 7-30 ಕ್ಕೆ ಮಹಾಪೂಜೆ 8-00 ಕ್ಕೆ ಹಿರೇ ರಂಗಪೂಜೆ, ಪಾನಕ ಪನೀವಾರ ಪ್ರಸಾದ ವಿತರಣೇ ಉತ್ಸವ ಬಲಿ, ಪುಷ್ಫರಥೋತ್ಸವ :- ಶ್ರೀ ದೇವಳದಿಂದ ಶ್ರೀಆಂಜನೇಯ ದೇವಳದವರೆಗೆ ಸಾಗಿ ತಿರುಗಿ ಬಂದು ಶಂಖ ತೀರ್ಥ ಸರೋವರದಲ್ಲಿ ತೆಪ್ಪೋತ್ಸವ ಮಾಡಲಾಯಿತು. ಶ್ರೀದೇವಳಕ್ಕೆ ಮರುಳಿದ ಉತ್ಸವ ಮೆರವಣಿಗೆಯು ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು. ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಈ ಸೇವೆಯಲ್ಲಿ ಪಾಲ್ಗೊಂದು ದೀಪ ಬೆಳಗಿಸಿ ಶ್ರೀದೇವರ ಕ್ರಪೆಗೆ ಪಾತ್ರರಾದರು. ದೀಪೋತ್ಸವದ ಅಂಗವಾಗಿ ಕರ್ನಾಟಕ ಮಹಿಳಾ ಯಕ್ಷಗಾನ ಮಂಡಳಿ ಬೆಂಗಳೂರು ಇವರು ಶಶಿಪ್ರಭಾ ಪರಿಣಯ ಎನ್ನುವ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.