ದಿನಾಂಕ 13-01-2016 : ಮಹೂರ್ತ ಬಲಿ : ಆಡಳಿತ ಮಂಡಳಿಯ ಸದಸ್ಯರು, ಮತ್ತು ಊರ ಸಮಸ್ತರು ಭಕ್ತಾದಿಗಳ ಪ್ರಾರ್ಥನೆಯೊಂದಿಗೆ ಸಂಜೆ 7-30ರ ಕರ್ಕಾಟಕ ಲಗ್ನದಲ್ಲಿ ಸಾಂಪ್ರಾದಾಯಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರೆ ಪಾರಂಭವಾಯಿತು.
ದಿನಾಂಕ -14-01-2016 : ಮಕರ ಸಂಕ್ರಮಣ : ಪೂರ್ವಾಹ್ನ ಗಣಹೋಮ, ನರಸಿಂಹ ಹೋಮ, ರಜತ ರಥೋತ್ಸವ ನಡೆಯಿತು
ಧ್ವಜಾರೋಹಣ : ಕಾರ್ಕಡ ಗ್ರಾಮದಿಂದ ಧ್ವಜ ಮರ (ಅಡಕೆ ಮರ) ವನ್ನು ಪೂಜಿಸಿ ಕೀಲು ಕುದುರೆ, ಬಿರುದಾವಳಿ ವಾದ್ಯ ಸಂಗೀತ, ವೇದ ಘೋಷದೊಂದಿಗೆ ವಿಶೇಷ ಮೆರವಣಿಗೆಯಲ್ಲಿ ಶ್ರೀದೇವಳಕ್ಕೆ ತರಲಾಯಿತು. ಚಿತ್ರಪಾಡಿ ಗ್ರಾಮದಿಂದ ಬಾಳೆಮರವನ್ನು ತಂದು ಸಂಜೆ 7-30ರ ಕರ್ಕಾಟಕ ಲಗ್ನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗರುಡಪಠವನ್ನು ಪೂಜಿಸಿ ಧ್ವಜಮರಕ್ಕೆ ಏರಿಸಲಾಯಿತು.
ಸಾಂಸ್ಕ್ರತಿಕ ಹಬ್ಬ ಉದ್ಘಾಟನೆ : 6-15ಕ್ಕೆ ಆಡಳಿತ ಮಂಡಳಿ ಸದಸ್ಯರಿಂದ ದೀಪ ಬೆಳಗಿಸಿ ಸಾಂಸ್ಕ್ರತಿಕ ಹಬ್ಬವನ್ನು ಉದ್ಘಾಟಿಸಲಾಯಿತು. 6-30 ರಿಂದ ಕೂಟಮಹಾ ಜಗತ್ತು ಸಾಲಿಗ್ರಾಮ (ರಿ) ಮಹಿಳಾ ವೇದಿಕೆಯಿಂದ ವಿವಿಧ ಮನೊರಂಜನಾ ಕಾರ್ಯಕ್ರಮದೊಂದಿಗೆ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.