ನೂತನ ಕಲಾತ್ಮಕ ದ್ವಾರಮಂಟಪ :- ಸುಮಾರು 2ಲಕ್ಷ ಮೌಲ್ಯ ವೆಚ್ಚದಲ್ಲಿ ಶ್ರೀಗುರುನರಸಿಂಹ, ಶ್ರೀ ಗಣಪತಿ, ಶ್ರೀ ದುರ್ಗಾಪರಮೇಶ್ವರಿ ಮತ್ತು ಜಯವಿಜಯ ಮೂರ್ತಿಗಳನ್ನು ಕಲಾತ್ಮವಾಗಿ ಶ್ರೀದೇವಳದ ಹೆಬ್ಬಾಗಿಲಿನ ಮೇಲೆ ರಚಿಸಲಾಯಿತು. ದಿನಾಂಕ 14-01-2016ರ ಸಂಜೆ 5-30ಕ್ಕೆ ಆಢಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ. ಅನಂತಪದ್ಮನಾಭ ಐತಾಳ, ಉಪಾಧ್ಯಕ್ಷ ಶ್ರೀ ಬಿ. ರಘುನಾಥ ಸೋಮಯಾಜಿ, ಕಾರ್ಯದರ್ಶಿ ಶ್ರೀ ಜಿ.ಮಂಜುನಾಥ ಮಯ್ಯ ಸದಸ್ಯರಾದ ಶ್ರೀ ಬಿಜೂರು ಬಲರಾಮ ಮಯ್ಯ, ಶ್ರೀ ಎಂ.ಕೆ. ಅಶೋಕಕುಮಾರ ಹೊಳ್ಳ ವೇ.ಮೂ. ಚಂದ್ರಶೇಖರ ಉಪಾಧ್ಯ, ಶ್ರೀ ಪ್ರಸನ್ನ ತುಂಗ, ಇವರು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಶ್ರೀದೇವರಿಗೆ ಸಮರ್ಪಿಸಿದರು.