ದಿನಾಂಕ 26-03-2016 ರಂದು ಲೋಕಕಲ್ಯಾಣಾರ್ಥವಾಗಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಶ್ರೀಲಕ್ಷ್ಮೀನಾರಾಯಣ ಹ್ರದಯ ಹೋಮವು , ದೇವಳದ ತಂತ್ರಿಗಳಾದ ವೇ.ಮೂ.ಕ್ರಷ್ಣ ಸೋಮಯಾಜಿ ಮತ್ತು ಋತ್ವಿಜರ ನೇತ್ರತ್ವದಲ್ಲಿ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಸನ್ನ ತುಂಗರ ಯಜಮಾನತ್ವದಲ್ಲಿ ಸಂಪನ್ನಗೊಂಡಿತು. ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ. ಅನಂತಪದ್ಮನಾಭ ಐತಾಳರು, ಸದಸ್ಯರಾದ ವೇ.ಮೂ. ಶ್ರೀಚಂದ್ರಶೇಖರ ಉಪಾಧ್ಯಾಯರು, , ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಸದಸ್ಯರು, ಗ್ರಾಮಮೋಕ್ತೇಸರರು, ಊರಿನ ಹತ್ತು ಸಮಸ್ತರು, ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿದರು. 600ಕ್ಕೂ ಮಿಕ್ಕಿ ಭಕ್ತಾದಿಗಳು ಭೋಜನ ಪ್ರಸಾದವನನು ಸ್ವೀಕರಿಸಿದರು.