ಶ್ರೀಆಂಜನೇಯ ದೇವಸ್ಥಾನ ಸಾಲಿಗ್ರಾಮದಲ್ಲಿ ದಿನಾಂಕ 22-04-2016ರ ಶುಕ್ರವಾರ ಆಂಜನೇಯ ಜಯಂತಿ ಆಚರಣೆಯು ಭಕ್ತರ ಸಹಕಾರದಿಂದ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ 5-30 ರಿಂದ ಪಂಚವಿಂಶತಿ ಕಲಶಾಭಿಷೇಕ, ಹೋಮ, ಸೀಯಾಳಾಭಿಷೇಕ, ಮಹಾಪಂಚಾಮ್ರತಾಭಿಷೇಕವು ಶ್ರೀದೇವಳದ ತಂತ್ರಿಗಳಾದ ವೇ.ಮೂ. ಕ್ರಷ್ಣ ಸೋಮಯಾಜಿ ಮತ್ತು ಸಂಗಡಿಗರು ಶ್ರೀದೇವಳದ ಅರ್ಚಕರಾದ ವೇ.ಮೂ. ಶ್ರೀನಿವಾಸ ಅಡಿಗರ ಸಾರಥ್ಯದಲ್ಲಿ ಯಶಸ್ವಿಯಾಗಿ ಜರುಗಿತು. ನೆರೆದಿದ್ದ ಭಕ್ತರಿಗೆ ಪಾನಕ ಪನೀವಾರ ಪ್ರಸಾದವನ್ನು ವಿತರಿಸಲಾಯಿತು. ಸಂಜೆ 7-00 ರಿಂದ ಮಹಾರಂಗಪೂಜೆ ಜರುಗಿತು. ಮೂರು ಸಾವಿರಕ್ಕೂ ನೆರದಿದ್ದ ಭಕ್ತಾದಿಗಳಿಗೆ ಶ್ರೀದೇವಳದ ವತಿಯಿಂದ ಮತ್ತು ಶ್ರೀಆಂಜನೇಯ ಸೇವಾ ಸಮಿತಿ ಮತ್ತು ಹತ್ತು ಸಮಸ್ತರಿಂದ ವಿಶೇಷ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ವಿತರಿಸಲಾಯಿತು. ಶ್ರೀಆಂಜನೇಯ ಸೇವಾ ಸಮಿತಿಯ ವತಿಯಿಂದ ಭಕ್ತಿ ಸಂಗೀತ ರಸಮಂಜರಿಯನ್ನು ಏರ್ಪಡಿಸಲಾಗಿತ್ತು.