ಶ್ರೀದೇವರು ಸರ್ವರಿಗೂ ಸನ್ಮಂಗಲ ಉಂಟು ಮಾಡಲಿ ಎನ್ನುವ ಸಂಕಲ್ಪದಿಂದ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದಲ್ಲಿ ಇದೇ ಜುಲೈ ಹತ್ತರಿಂದ ದಿನಾ ಬೆಳಗ್ಗೆ ಐದರಿಂದ ಎಂಟರವರೆಗೆ ಸ್ವಯಂಪ್ರೇರಿತ ಸಮಾನಮನಸ್ಕ ಋತ್ವಿಜರಿಂದ ಸೇವಾರೂಪದಲ್ಲಿ ಋಕ್ ಸಂಹಿತಾ ಪಾರಾಯಣ ಮತ್ತು ಅಭಿಷೇಕ ನಡೆಯುತ್ತಿದೆ ಅದೇ ರೀತಿ ಶ್ರೀದೇವರ ಅಭಿಷೇಕದಲ್ಲಿ ಕೋಟ ಹದಿನಾಲ್ಕು ಗ್ರಾಮದ ವಿಪ್ರರು ಸಹಕರಿಸುತ್ತಿದ್ದಾರೆ..ಇದರೊಂದಿಗೆ ಕೋಟ ಹದಿನಾಲ್ಕು ಗ್ರಾಮದಲ್ಲಿರುವ ವಿಪ್ರ ಮಹಿಳೆಯರಿಂದ ಬೆಳಗ್ಗೆ ಎಂಟರಿಂದ ಒಂಭತ್ತರವರೆಗೆ ಸೇವಾರೂಪದಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಲಲಿತ ಸಹಸ್ರನಾಮ ಪಾರಾಯಣ ಪಠಣ ನಡೆಯುತ್ತಿದೆ. ಜುಲೈ ಹದಿನೇಳರಂದು ಈ ಸೇವೆಯು ಸಂಪನ್ನಗೊಳ್ಳಲಿದೆ ಲೋಕಹಿತಕ್ಕಾಗಿ ಸೇವೆಯನ್ನು ಮಾಡುತ್ತಿರುವ ಸರ್ವರಿಗೂ ಶ್ರೀದೇವಳದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಪರವಾಗಿ ಕ್ರತಜ್ಞತೆಯನ್ನು ಸಲ್ಲಿಸುತ್ತೇವೆ. ಹಾಗೂ ಶ್ರೀದೇವರು ಈ ಸೇವೆಯಿಂದ ಸಂಪ್ರೀತನಾಗಿ ಸರ್ವರಿಗೂ ಸನ್ಮಂಗಲ ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ.