ಶ್ರೀ ಗುರುನರಸಿಂಹ ದೇವಳದ ರಥಬೀದಿಯಲ್ಲಿ ಕಳೆದ 24 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಾಲಿಗ್ರಾಮ ಇವರು ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬಂದಿರುತ್ತಾರೆ.
ಈ ವರ್ಷ 25ನೇ ವರ್ಷವನ್ನು ಆಚರಿಸುತ್ತಿರುವ ಶುಭಸಂಧರ್ಭದಲ್ಲಿ ಅಂದಾಜು 65ಲಕ್ಷ ವೆಚ್ಚದಲ್ಲಿ ಸುಮಾರು 1,111-00 ಗ್ರಾಂ ಚಿನ್ನದ ಕಿರೀಟ ರಚನೆ ಮತ್ತು 1,111-ಕಾಯಿ ಗಣಯಾಗ ನಡೆಯಲಿದೆ ಹಾಗೂ ವಿವಿಧ ಅಗತ್ಯವಿರುವ ಸಾಮಾಜಿಕ ಸೇವೆಯನ್ನು ಮಾಡಲಾಗುತ್ತಿದೆ.
ದಿನಾಂಕ 05-09-2015 ರಿಂದ 09-09-2015ರವರೆಗಿನ ಐದು ದಿನಗಳ ಕಾಲ ಆಚರಿಸುತ್ತಿರುವ ಉತ್ಸವದಲ್ಲಿ ನಿತ್ಯ ಮಧ್ಯಾಹ್ನ ಅನ್ನದಾನ ಮತ್ತು ಸಂಜೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 08-09-2016ನೇ ಗುರುವಾರ ಮಧ್ಯಾಹ್ನ 11-30ಕ್ಕೆ ಮತ್ತು ಗಣಯಾಗದ ಪೂರ್ಣಾಹುತಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಳಿಗೆ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ನೂತನ ವೆಬ್ ಸೈಟ್ ವಿಳಾಸ www.ssgssaligrama.com ಭೇಟಿ ನೀಡಿ. ಹಾಗೂ ನಡೆಯುವ ಎಲ್ಲಾ ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳಬೇಕಾಗಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ಪರವಾಗಿ ವಿನಂತಿಸಲಾಗಿದೆ.