ದಿನಾಂಕ 05-09-2016 ರಂದು ಗಣೇಶ ಚತುರ್ಥಿಯ ದಿನದಂದು ಶ್ರೀದೇವಳದಲ್ಲಿ 120ಕಾಯಿ ಗಣಯಾಗ, ನರಸಿಂಹ ಹೋಮ, ಮೂಡುಗಣಪತಿ ಸೇವೆ, ಸಂಜೆ ಶ್ರೀಗಣಪತಿ ದೇವರಿಗೆ ರಂಗಪೂಜೆ, ಶ್ರೀನರಸಿಂಹ ದೇವರಿಗೆ ಕಿರಿರಂಗಪೂಜೆ ಉತ್ಸವ ಬಲಿ ನಡೆಯಲಿದೆ. ಭಕ್ತಾದಿಗಳು ಸಕ್ರಿಯವಾಗಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀದೇವಳದ ಆಡಳಿತ ಮಂಡಳಿಯು ಅಪೇಕ್ಷಿಸುತ್ತದೆ.