ದಿನಾಂಕ 11-04-2017 ರ ಮಂಗಳವಾರದಂದು ಶ್ರೀಆದೇವಳದಲ್ಲಿ ಆಂಜನೇಯ ಜಯಂತಿ ಆಚರಣೆ ಪ್ರಯುಕ್ತ ಬೆಳಗ್ಗೆ 5.30ರಿಂದ ಯಜುರ್ವೇದ ಸಂಹಿತಾ ಪಾರಾಯಣ, ಕಲಾಶಾಭಿಷೇಕ, ಪಂಚವಿಂಶತಿ ಕಲಶಾಭಿಷೇಕ, ಹೋಮ, ಮಹಾಪಂಚಾಮ್ರತಾಭಿಷೇಕ ಜರುಗಲಿದೆ ಹಾಗೂ ಸಂಜೆ 6.30 ಕ್ಕೆ “ಮಹಾರಂಗಪೂಜೆ” ಜರುಗಲಿದೆ. ಹಾಗೂ ಶ್ರೀಆಂಜನೇಯ ಸೇವಾ ಸಮಿತಿಯ ವತಿಯಿಂದ ವಿಶೇಷ ಭಕ್ತಿ ಸುಧೆ ಮತ್ತು ವಿಶೇಷ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ಶ್ರೀದೇವಳದ ಆಡಳಿತ ಮಂಡಳಿಯು ಅಪೇಕ್ಷಿಸುತ್ತದೆ