||ಶ್ರೀಗುರುನರಸಿಂಹಃ ಪ್ರಸನ್ನಃ||
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ
ಇದೇ ಸಪ್ಟಂಬರ್ 13ರ ರಾತ್ರಿ 8-00ರಿಂದ ಶ್ರೀಕ್ರಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀಗುರುನರಸಿಂಹ ದೇವರಿಗೆ ಮತ್ತು ಶ್ರೀಗೋಪಾಲಕ್ರಷ್ಣ ದೇವರಿಗೆ ವಿಶೇಷಪೂಜೆ ನಡೆಯುಲಿದೆ.ಸಪ್ಟಂಬರ್ 14ರ ಮಧ್ಯಾಹ್ನ ವಿಟ್ಲಪಿಂಡಿ ಆಚರಣೆಯ ಪ್ರಯುಕ್ತ 4-00 ಕ್ಕೆ ಶ್ರೀಗುರುನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಉತ್ಸವದ ಮೆರವಣಿಗೆಯಲ್ಲಿ ಬಿರುದಾವಳಿ ವೇದಘೋಷ ಸಕಲ ಉಪಚಾರದೊಂದಿಗೆ ಶ್ರೀದೇವರು ನಿಗದಿತ ಕಟ್ಟಲೆ ಸ್ಥಳಗಳಲ್ಲಿ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಎನ್ಎಚ್66 ನಲ್ಲಿ ಚಲಿಸಿ
ಎಡಬೆಟ್ಟು ಶ್ರೀಗೋಪಾಲಕ್ರಷ್ಣ ದೇವಸ್ಥಾನದಲ್ಲಿ ವಿರಮಿಸುತ್ತಾರೆ ನಂತರ ಶ್ರೀ ಗೋಪಾಲಕ್ರಷ್ಣ ದೇವರಿಗೆ ಮಹಾಪೂಜೆಯಾಗುತ್ತದೆ ಶ್ರೀದೇವರು ಅಲ್ಲಿಯ ಗ್ರಾಮಸ್ಥರಿಂದ ಸಕಲ ಪೂಜೆಗಳನ್ನು ಹಾಗೂ ಅಷ್ಟಾವಧಾನ ಸೇವೆಯನ್ನು ಸ್ವೀಕರಿಸಿದ ನಂತರ
ಉತ್ಸವವು ಮರಳಿ ಶ್ರೀಆಂಜನೇಯ ದೇವಳಕ್ಕೆ ಆಗಮಿಸಿ ಅಲ್ಲಿ ಪೂಜೆಗೊಂಡು ಶ್ರೀದೇವಳಕ್ಕೆ ಹಿಂದುರಗಿ ಮಹಾಪೂಜೆ, ಸೋಣೆಆರತಿ ನಡೆಯಲಿದೆ. ಭಕ್ತಾದಿಗಳು ಈ ವಿಶೇಷ ಸೇವೆಯಲ್ಲಿ ಪಾಲ್ಗೊಂಡು ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ
ಅಧ್ಯಕ್ಷರು ಮತ್ತು ಸದಸ್ಯರು
ಆಡಳಿತ ಮಂಡಳಿ